Publish Date: Sat, 12 Oct 2019 (15:38 IST)
Updated Date: Sat, 12 Oct 2019 (15:40 IST)
ಮಹರ್ಷಿ ವಾಲ್ಮೀಕಿ ಜಯಂತ್ಯುತ್ಸವ ಅದ್ಧೂರಿಯಾಗಿ ನಡೆಯಿತು.
ಜಯಂತಿ ಆಚರಣೆ ಹಿನ್ನೆಲೆಯಲ್ಲಿ ಮಹರ್ಷಿ ವಾಲ್ಮೀಕಿ ಯುವ ಘಟಕದ ನೇತೃತ್ವದಲ್ಲಿ ದಾವಣಗೆರೆ ನಗರದಲ್ಲಿ ವೈಭವದ ಬೈಕ್ ರ್ಯಾಲಿ ನಡೆಯಿತು.
ವೀರ ಮದಕರಿ ನಾಯಕರ ಲಾಂಛನದ ಧ್ವಜಗಳನ್ನು ಹಿಡಿದ ನೂರಾರು ಯುವಕರು, ವಾಲ್ಮೀಕಿಯವರ ಜಯ ಘೋಷದೊಂದಿಗೆ ರ್ಯಾಲಿಯಲ್ಲಿ ಸಾಗಿದರು.
ಆರಂಭದಲ್ಲಿ ಮಹರ್ಷಿ ವಾಲ್ಮೀಕಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು. ಮುಖಂಡ ಎಚ್.ಕೆ. ರಾಮಚಂದ್ರಪ್ಪ ರ್ಯಾಲಿಗೆ ಚಾಲನೆ ನೀಡಿದ್ರು.