ಇಂದು ಮಹಾಲಯ ಅಮಾವಾಸ್ಯೆ. ಶಿವ ದೇವಾಲಯಗಳಲ್ಲಿ ಬೆಳಿಗ್ಗೆನಿಂದಲೇ ಪೂಜಾ ಪುನಸ್ಕಾರಗಳು ನಡೆಯುತ್ತಿವೆ. ಗಡಿ ಜಿಲ್ಲೆ ಚಾಮರಾಜನಗರದ ಮಲೈಮಹದೇಶ್ವರ ಬೆಟ್ಟದಲ್ಲಿಯೂ ಅಮವಾಸ್ಯೆಯ ವಿಶೇಷ ಪೂಜೆ ನಡೆಯಿತು.
ತಮಿಳುನಾಡು-ಕರ್ನಾಟಕ ರಾಜ್ಯದ ಗಡಿಯಲ್ಲಿರುವ ಮಹದೇಶ್ವರ ಬೆಟ್ಟಕ್ಕೆ ಸಾವಿರಾರು ಭಕ್ತರು ಮಾದಪ್ಪನಿಗೆ ವಿಶೇಷ ಪೂಜೆ ಸಲ್ಲಿಸಿ, ತಮ್ಮ ಹರಕೆಗಳನ್ನ ಒಪ್ಪಿಸಿದರು.
ಚಾಮರಾಜನಗರ ಜಿಲ್ಲೆಯ ಕಂದಹಳ್ಳಿ ಮಹದೇಶ್ವರ, ಯಡಬೆಟ್ಟದ ಮಾದಪ್ಪ ದೇಗುಲ, ವೀರಭದ್ರೇಶ್ವರ ದೇವಸ್ಥಾನ ಸೇರಿದಂತೆ ಎಲ್ಲ ಶಿವನ ದೇವಾಲಯಗಳಲ್ಲಿ ವಿಶೇಷ ಪೂಜೆ ನಡೆಯಿತು.
ಅಮಾವಾಸ್ಯೆ ದಿನಗಳಲ್ಲಿ ವಿಶೇಷ ಪೂಜೆಗಳು ಇರುವುದರಿಂದ ಜನ ಸೇರುವುದು ಸಾಮಾನ್ಯವಾಗಿರುತ್ತದೆ. ಹಾಗೇಯೇ ಮಹದೇಶ್ವರ ಬೆಟ್ಟ ರಾಜ್ಯದ ಪ್ರತಿಷ್ಠಿತ ದೇವಾಲಯಗಳಲ್ಲಿ ಒಂದಾಗಿದೆ.
ಅಮವಾಸ್ಯೆಯ ಜೊತೆಯಲ್ಲಿ ಪಿತೃಪಕ್ಷವೂ ಇರುವುದರಿಂದ ಎಲ್ಲ ದೇವಾಲಯಗಳಿಗೆ ಭಕ್ತ ಸಾಗರವೇ ಹರಿದು ಬರುತ್ತಿದೆ.