Publish Date: Thu, 27 Sep 2018 (18:07 IST)
Updated Date: Thu, 27 Sep 2018 (18:09 IST)
ಕಲಬುರಗಿ, ಶೃಂಗೇರಿ ಬಳಿಕ ಇದೀಗ ಸಿಎಂ ಹೆಚ್.ಡಿ.ಕುಮಾರಸ್ವಾಮಿ ದೇಗುಲ ಯಾತ್ರೆಯನ್ನು ಮುಂದುವರಿಸಿದ್ದಾರೆ.
ಕಲಬುರಗಿಯ ದತ್ತಾತ್ರೇಯ, ಶೃಂಗೇರಿ ಶಾರದಾಂಬೆ ದರ್ಶನ ಬಳಿಕ ಸಿಎಂ ಹೆಚ್.ಡಿ.ಕುಮಾರಸ್ವಾಮಿ ತಮಿಳುನಾಡಿನ ಪ್ರಸಿದ್ಧ ತಿರುಚಂದೂರುದನಲ್ಲಿರುವ ಮುರುಗನ್ ದೇವಾಲಯಕ್ಕೆ ಭೇಟಿ ನೀಡಿದರು.
ಮುರುಗನ್ ದೇವಾಲಯದಲ್ಲಿ ವಿಶೇಷ ಪೂಜೆಯನ್ನು ಸಿಎಂ ಹೆಚ್.ಡಿ.ಕುಮಾರಸ್ವಾಮಿ ಸಲ್ಲಿಸಿದರು. ಮುಖ್ಯಮಂತ್ರಿ ಆಗುವ ಮೊದಲು ಹಾಗೂ ಸಿಎಂ ಆದ ಮೇಲೆಯೂ ದೇಗುಲ ಭೇಟಿಯನ್ನು ಹೆಚ್.ಡಿ.ಕೆ ಮುಂದುವರಿಸಿದ್ದಾರೆ.
ಮುರುಗನ್ ದೇವಾಲಯದಲ್ಲಿ ಕುಟುಂಬ ಸಮೇತರಾಗಿ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದರು. ಸಿಎಂ ಆರೋಗ್ಯ ಸುಧಾರಣೆಗಾಗಿ ಅವರ ಕುಟುಂಬ ವರ್ಗದವರು ವಿವಿಧ ದೇವಸ್ಥಾನಗಳಲ್ಲಿ ಪೂಜೆ, ಹೋಮ ನಡೆಸುತ್ತಲೇ ಬರುತ್ತಿದ್ದಾರೆ.
Jagadeesh
Publish Date: Thu, 27 Sep 2018 (18:07 IST)
Updated Date: Thu, 27 Sep 2018 (18:09 IST)