Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಮಹಾಲಯ ಅಮವಾಸ್ಯೆಯ ಮಹತ್ವವೇನು? ತಿಳಿಬೇಕಾ

ಮಹಾಲಯ ಅಮವಾಸ್ಯೆಯ ಮಹತ್ವವೇನು? ತಿಳಿಬೇಕಾ
ಬೆಂಗಳೂರು , ಸೋಮವಾರ, 8 ಅಕ್ಟೋಬರ್ 2018 (14:08 IST)
ಬೆಂಗಳೂರು : ಆಶ್ವೀಜ ಮಾಸದ ಅಮವಾಸ್ಯೆಯನ್ನು ಮಹಾಲಯ ಅಮವಾಸ್ಯೆಯೆಂದು ಆಚರಿಸಲಾಗುತ್ತದೆ. ದಸರಾ ಮೊದಲು ಬರುವ ಅಮವಾಸ್ಯೆಯೇ ಮಹಾಲಯ ಅಮವಾಸ್ಯೆ. ನಾಳೆಯಿಂದ ನವರಾತ್ರಿ ಆರಂಭ.


ಪಿತೃಪಕ್ಷ ಭಾದ್ರಪದ ಮಾಸದ ಪೂರ್ಣಿಮೆಯಂದು ಶುರುವಾಗುತ್ತದೆ. 16 ದಿನಗಳ ಕಾಲ ಇರುತ್ತದೆ. ಆಶ್ವೀಜ ಮಾಸದ ಅಮವಾಸ್ಯೆಯಂದು ಪಿತೃಪಕ್ಷ ಮುಕ್ತಾಯವಾಗುತ್ತದೆ. ಗರುಡ ಪುರಾಣದಲ್ಲಿ ಮಹಾಲಯ ಅಮವಾಸ್ಯೆಗೆ ಬಹಳ ಮಹತ್ವವಿದೆ. ಅದ್ರ ಪ್ರಕಾರ ನಮ್ಮ ಪೂರ್ವಜರು ಈ ದಿನ ಮನೆ ಬಾಗಿಲಿಗೆ ಬರ್ತಾರಂತೆ. ಕುಟುಂಬಸ್ಥರು ತಮ್ಮ ಶ್ರಾದ್ಧ ಮಾಡಿ ಇನ್ನೊಮ್ಮೆ ವಿದಾಯ ಹೇಳಲಿ ಎಂದು ಅವರು ಬಯಸುತ್ತಾರೆ. ಅಕಾಲ ಮೃತ್ಯುವಿಗೆ ತುತ್ತಾದವರ ಶ್ರಾದ್ಧವನ್ನು ಕೂಡ ಇಂದೇ ಮಾಡಲಾಗುತ್ತದೆ.


ಶ್ರಾದ್ಧ ಮಾಡಿದ್ರೆ ಪೂರ್ವಜರು ಖುಷಿಯಾಗ್ತಾರೆ. ಸಂಪತ್ತು, ವಿದ್ಯೆ, ಸುಖವನ್ನು ನೀಡ್ತಾರೆ. ಒಂದು ವೇಳೆ ಈ ದಿನ ಶ್ರಾದ್ಧ ಮಾಡದೆ ಹೋದಲ್ಲಿ ಪೂರ್ವಜರು ಕೋಪಗೊಳ್ತಾರೆ. ಇದ್ರಿಂದ ಮನೆ ಸುಖ-ಶಾಂತಿ ಹಾಳಾಗುತ್ತದೆ ಎಂದು ನಂಬಲಾಗಿದೆ.


ಎಲ್ಲ ಪೂರ್ವಜರು ಸಾವನ್ನಪ್ಪಿದ ತಿಥಿಯನ್ನು ನೆನಪಿನಲ್ಲಿಟ್ಟುಕೊಂಡು ಆ ದಿನ ಶ್ರಾದ್ಧ ಮಾಡಲು ಸಾಧ್ಯವಿಲ್ಲ. ಹಾಗಾಗಿ ಈ ದಿನ ಎಲ್ಲರ ಹೆಸರಿನಲ್ಲಿ ತರ್ಪಣ ಬಿಡುವುದು ಒಳ್ಳೆಯದು. ಈ ದಿನ ಬ್ರಾಹ್ಮಣರೊಬ್ಬರನ್ನು ಮನೆಗೆ ಕರೆದು ಊಟ ಹಾಕಬೇಕು. ಜೊತೆಗೆ ಒಳ್ಳೆಯದಾಗಲೆಂದು ಆಶೀರ್ವಾದ ಮಾಡುವಂತೆ ಅವರನ್ನು ಪ್ರಾರ್ಥಿಸಬೇಕು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

 

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ರಾಶಿ ಭವಿಷ್ಯ ಹೀಗಿದೆ ನೋಡಿ