Publish Date: Wed, 27 Dec 2017 (07:38 IST)
Updated Date: Wed, 27 Dec 2017 (07:44 IST)
ಉತ್ತರ ಕರ್ನಾಟಕ: ಮಹದಾಯಿ ಯೋಜನೆಗೆ ಆಗ್ರಹಿಸಿ ಇಂದು ಉತ್ತರ ಕರ್ನಾಟಕದಲ್ಲಿ ಜಯ ಕರ್ನಾಟಕ ಸಂಘಟನೆಯಿಂದ ಬಂದ್ ಮಾಡಲಾಗಿದೆ.
ಗದಗ ಜಿಲ್ಲೆಯ ನರಗುಂದ ಪಟ್ಟಣದಲ್ಲಿ ಪ್ರತಿಭಟನಕಾರರ ಆಕ್ರೋಶ ಭುಗಿಲೆದ್ದು, ರಸ್ತೆಯ ಮಧ್ಯದಲ್ಲಿ ಟಯರ್ ಗಳನ್ನು ಸುಟ್ಟು ಪ್ರತಿಭಟನೆ ಮಾಡುತ್ತಿದ್ದಾರೆ.
ಮುಂಜಾನೆಯಿಂದಲ್ಲೇ ಪ್ರತಿಭಟನೆಗಿಳಿದ ಹೋರಾಟಗಾರರು ಗೋವಾ ಸಿಎಂ ಮನೋಹರ್ ಪರಿಕ್ಕರ್ ವಿರುದ್ಧ ಘೋಷಣಿ ಕೂಗುತ್ತಾ, ಬಿಎಸ್ ಯಡಿಯುರಪ್ಪ ಅವರನ್ನು ವಚನ ಭೃಷ್ಟ ಎಂದು ಘೋಷಿಸುತ್ತಾ ರಸ್ತೆಗಿಳಿದ ವಾಹನಗಳನ್ನು ತಡೆಯುತ್ತಾ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ