Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಯಡಿಯೂರಪ್ಪ ಭಾವುಕರಾಗಿ ಹೇಳಿದ್ದೇನು ಗೊತ್ತಾ…?

ಯಡಿಯೂರಪ್ಪ ಭಾವುಕರಾಗಿ ಹೇಳಿದ್ದೇನು ಗೊತ್ತಾ…?
ಬೆಂಗಳೂರು , ಮಂಗಳವಾರ, 26 ಡಿಸೆಂಬರ್ 2017 (14:57 IST)
ಬೆಂಗಳೂರು: ‘ಮಹದಾಯಿ ಯೋಜನೆ ಜಾರಿಗೆ ತಾನು ಪ್ರಾಮಾಣಿಕವಾಗಿ ಪ್ರಯತ್ನ ಮಾಡುತ್ತಿದ್ದು, ಆದರೆ ಇದಕ್ಕೆ  ಸ್ವಪಕ್ಷೀಯ ನಾಯಕರು ಬೆಂಬಲ ನೀಡುತ್ತಿಲ್ಲ ಎಂದು ಇಂದು ನಡೆದ ಕೋರ್ ಕಮಿಟಿ ಸಭೆಯಲ್ಲಿ ಬಿಜೆಪಿ ರಾಜಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಬೇಸರದಿಂದ ಹೇಳಿದ್ದಾರೆ.


‘ಎಲ್ಲರೂ ಏಕೆ ಸುಮ್ಮನಿದ್ದಾರೆ ಎಂದು ಅರ್ಥವಾಗುತ್ತಿಲ್ಲ. ಈ ಹಿಂದೆ ಮೂರು ಕಡೆ ಕಾಂಗ್ರೆಸ್ ಸರ್ಕಾರವಿದ್ದರು ಸಮಸ್ಯೆ ಬಗೆಹರಿಸಿರಲಿಲ್ಲ. ಮಹದಾಯಿ ಯೋಜನೆ ಜಾರಿಗೆ ಹೋರಾಡುತ್ತಿರುವವರನ್ನು ಬಿಜೆಪಿ ಕಚೇರಿ ಮುಂದೆ ಧರಣಿ ಕೂರಲು ಕಾಂಗ್ರೆಸ್ ಪಕ್ಷ ಸಂಚು ರೂಪಿಸಿದೆ’ ಎಂದು ಬಿಎಸ್ ವೈ ಹೇಳಿದ್ದಾರೆ.


‘ನಾನು ಉಪಮುಖ್ಯಮಂತ್ರಿಯಾಗಿದ್ದಾಗ  ಕಳಸಾ ಬಂಡೂರಿ ಯೋಜನೆ ಜಾರಿಗೆ 100ಕೋಟಿ ರೂ. ಘೋಷಿಸಿದ್ದೆ.ಈಗ ನನ್ನ ವಿರುದ್ಧ ದಿನಕ್ಕೊಂದು ಬಣ ಕಟ್ಟಿಕೊಂಡು ಅಪಪ್ರಚಾರ ಮಾಡಲಾಗುತ್ತಿದೆ. ನನ್ನ ತೇಜೋವಧೆಗೆ ಕಾಂಗ್ರೆಸ್ ಪ್ರಯತ್ನಿಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಮಹದಾಯಿ ಹೋರಾಟಗಾರರಿಗೆ ವಾಟಾಳ್ ನಾಗರಾಜ್ ನೀಡಿದ ಬೆಂಬಲ ಏನು ಗೊತ್ತಾ...?