Publish Date: Thu, 09 Jul 2020 (14:45 IST)
Updated Date: Thu, 09 Jul 2020 (14:46 IST)
ಅವರಿಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಊರುಗಳು ಬೇರೆಯಾಗಿವೆ. ಆದರೆ ಇಬ್ಬರ ಪ್ರೇಮ, ಮನಸ್ಸು ಒಂದೇ ಆಗಿತ್ತು.
ಆದರೆ ಜಾತಿ ಕಾರಣಕ್ಕೆ ಯುವ ಜೋಡಿಯ ಮದುವೆಗೆ ಪಾಲಕರು ಅಡ್ಡಿಪಡಿಸಿದ್ದಾರೆ.
ಇದನ್ನೇ ಮನಸ್ಸಿಗೆ ಹಚ್ಚಿಕೊಂಡ ಪ್ರೇಮಿಗಳು ಕತ್ತು ಕುಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಸ್ಥಳೀಯರು ಗಾಯಾಳು ಪ್ರೇಮಿಗಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನಲ್ಲಿ ಈ ಘಟನೆ ನಡೆದಿದೆ.