Publish Date: Fri, 14 Jan 2022 (09:15 IST)
Updated Date: Fri, 14 Jan 2022 (09:18 IST)
ಹುಬ್ಬಳ್ಳಿ: ಪ್ರೀತಿ, ಪ್ರೇಮದಲ್ಲಿ ಮುಖ್ಯವಾಗಿ ಬೇಕಾಗಿರುವುದು ನಂಬಿಕೆ. ಆದರೆ ಆ ನಂಬಿಕೆ, ವಿಶ್ವಾಸವನ್ನೇ ಮುರಿದರೆ? ಅದನ್ನು ನಿಷ್ಕಲ್ಮಶ ಪ್ರೀತಿ ಎಂದು ಕರೆಯಲಾಗದು. ಅಂತಹದ್ದೇ ಒಂದು ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.
ಪ್ರೇಮಿಯೇ 17 ವರ್ಷದ ಅಪ್ರಾಪ್ತ ಯುವತಿಯನ್ನು ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಅತ್ಯಾಚಾರವೆಸಗಿರುವ ಘಟನೆ ನಡೆದಿದೆ. ಈ ಸಂಬಂಧ ಯುವತಿಯ ತಾಯಿ ಪೊಲೀಸರಿಗೆ ದೂರು ನೀಡಿದ್ದಾರೆ.
ಪ್ರೀತಿ, ಪ್ರೇಮದ ನಾಟಕವಾಡಿದ್ದ ಆರೋಪಿ ಆಕೆಯನ್ನು ಪುಸಲಾಯಿಸಿ ಅರಣ್ಯಪ್ರದೇಶವೊಂದಕ್ಕೆ ಕರೆದೊಯ್ದು ತನ್ನ ಮನದಿಂಗಿತ ಹೇಳಿದ್ದಾನೆ. ಆದರೆ ಆಕೆ ಒಪ್ಪದೇ ಇದ್ದಾಗ ಅತ್ಯಾಚಾರವೆಸಗಿದ್ದಾನೆ ಎಂದು ದೂರಿನಲ್ಲಿ ಹೇಳಲಾಗಿದೆ. ಇದೀಗ ಪೊಲೀಸರು ಆರೋಪಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.