Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಅಹಮ್ಮದಾಬಾದ್: ಅಪರಿಚತ ಯುವಕರಿಬ್ಬರು ಮನೆಯೊಳಗೇ ನುಗ್ಗಿ 19 ವರ್ಷದ ವಿವಾಹಿತ ಯುವತಿಯನ್ನು ಅತ್ಯಾಚಾರ ಮಾಡಿದ ಘಟನೆ ಅಹಮ್ಮದಾಬಾದ್ ನಲ್ಲಿ ನಡೆದಿದೆ.
ಒಬ್ಬ ವ್ಯಕ್ತಿಯ ಹೆಸರು ಕೇಳಿಕೊಂಡು ಬಂದ ಆರೋಪಿಗಳು ತಿನ್ನಲು ಏನಾದರೂ ಕೊಡುವಂತೆ ಯುವತಿಯನ್ನು ಕೇಳುತ್ತಾರೆ. ಆಕೆ ಒಳಗೆ ಹೋಗಲೆತ್ನಿಸಿದಾಗ ನೂಕಿ ಹಾಲ್ ನಲ್ಲಿಯೇ ಅತ್ಯಾಚಾರವೆಸಗುತ್ತಾರೆ. ಅಲ್ಲದೆ, ಬ್ಲೇಡ್ ನಿಂದ ಹಲ್ಲೆ ನಡೆಸಲು ಮುಂದಾಗುತ್ತಾರೆ.
ಈ ವೇಳೆ ಯುವತಿ ಜೋರಾಗಿ ಕಿರುಚಿಕೊಂಡಿದ್ದರಿಂದ ನೆರೆಹೊರೆಯವರು ಬರುತ್ತಾರೆ. ಆದರೆ ಇದಕ್ಕೂ ಮೊದಲೇ ಆರೋಪಿಗಳು ಸ್ಥಳದಿಂದ ಪರಾರಿಯಾಗುತ್ತಾರೆ. ಈ ಬಗ್ಗೆ ಸ್ವತಃ ಯುವತಿ ಪೊಲೀಸರಿಗೆ ದೂರು ನೀಡಿದ್ದು, ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.