Publish Date: Sun, 05 Jul 2020 (15:14 IST)
Updated Date: Sun, 05 Jul 2020 (15:16 IST)
ಅವರಿಬ್ಬರೂ ನಾಲ್ಕೈದು ವರ್ಷ ಲವ್ ಮಾಡಿದ್ದರು. ಆದರೆ ಏಕಾಏಕಿ ಹುಡುಗ ಕೈ ಕೊಟ್ಟೇ ಬಿಟ್ಟ. ಇದರಿಂದ ನೊಂದ ಪ್ರೇಯಸಿ ಮಾಡಿದ್ದೇನು?
ಲವ್ ಮಾಡಿ ಹುಡುಗ ಕೈಕೊಟ್ಟಿದ್ದರಿಂದಾಗಿ ಮನನೊಂದ ಯುವತಿಯೊಬ್ಬಳು ಹುಡುಗನ ವಿರುದ್ಧ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಅಂಗನವಾಡಿ ಶಿಕ್ಷಕಿ ಪವಿತ್ರ ಆತ್ಮಹತ್ಯೆ ಮಾಡಿಕೊಂಡಿದ್ದರೆ, ಖಾಸಗಿ ಸಂಸ್ಥೆ ಉದ್ಯೋಗಿ ನಾಗೇಶ್ ಕೈಕೊಟ್ಟ ಲವರ್.
ನಾಗೇಶ್ ಬೇರೆ ಮದುವೆಯಾಗಿದ್ದೇ ಪವಿತ್ರ ಆತ್ಮಹತ್ಯೆ ಮಾಡಿಕೊಳ್ಳಲು ಕಾರಣ ಎಂದು ಹುಡುಗಿ ಮನೆಯವರು ದೂರಿದ್ದಾರೆ.
ಬೆಂಗಳೂರಿನ ದಾಸರಹಳ್ಳಿಯಲ್ಲಿ ಘಟನೆ ನಡೆದಿದ್ದು, ನಾಗೇಶ್ ನನ್ನು ಪೊಲೀಸರು ಬಂಧನ ಮಾಡಿದ್ದಾರೆ.