Webdunia - Bharat's app for daily news and videos

Install App

ಲವ್ ಕ್ಯಾಸ್ಟ್ ದೋಖಾ...

Webdunia
ಮಂಗಳವಾರ, 3 ಜುಲೈ 2018 (18:37 IST)
ಅವರಿಬ್ಬರದ್ದು 5 ವರ್ಷಗಳ ಲವ್‌ ಕಹಾನಿ..ಆ ಪ್ರೇಮಲೋಕದಲ್ಲಿ ಹದಿಹರೆಯದ ಹುಡುಗ,ಹುಡುಗಿ ಜೀವನದ ಕನಸ್ಸನ್ನ ಕಟ್ಟಿಕೊಂಡಿದ್ದರು..ಇನ್ನೇನು ಆ ಇಬ್ಬರ ಪ್ರೀತಿ ಮದುವೆಯಾಗಿ ಹೊಸ ಜೀವನ ಪ್ರಾರಂಭಿಸಬೇಕಿತ್ತು..ಆದರೇ ಆ ಸ್ವಚ್ಚಂದ ಪ್ರೀತಿಗೆ ಜಾತಿ ಅನ್ನೋ ಮುಳ್ಳು ಅಡ್ಡಬಂದು ಒಂದು ಜೀವವನ್ನೇ ಬಲಿಪಡೆದುಕೊಂಡಿದೆ.

 ಒಬ್ಬರನ್ನೊಬ್ಬರು ಗಾಢವಾಗಿ ಪ್ರೀತಿಸಿಕೊಳ್ಳುತ್ತಿದ್ದಾರೆ ಅಂತಾ ಅನಿಸುತ್ತದೆ. ಆದರೇ ಈ ಪ್ರೀತಿ ಎಲ್ಲೆಗೂ ಮೀರಿ ಇಂದು ಒಂದು ಪ್ರಾಣವನ್ನೇ ಬಲಿಪಡೆದುಕೊಂಡಿದೆ..ಪ್ರೀತಿಸಿದಾಕೆ ಸಿಗದಿದ್ದಕ್ಕೆ ಈ ಸ್ಪುರದೃಪಿ ಯುವಕ ತನ್ನ ಪ್ರಾಣವನ್ನೇ ತ್ಯಜಿಸಿಬಿಟ್ಟಿದ್ದಾನೆ. ಈ ಇಬ್ಬರ ಸ್ವಚ್ಚಂದ ಪ್ರೇಮಕ್ಕೆ ವಿಲನ್ ಆಗಿದ್ದು, ಆ ಯುವತಿಯ ತಂದೆ.

 ತುಮಕೂರು ನಗರದ ಕ್ಯಾತ್ಸಂದ್ರ ಬಳಿಯ ಬಸವಪಟ್ಟಣದ ರಾಘವೇಂದ್ರ ತಾನು  ಪ್ರೀತಿಸಿದ ಹುಡುಗಿ ಸಿಗದ್ದಿದ್ದಕ್ಕೆ ಮನನೊಂದು ಮನೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ತುರುವೇಕೆರೆ ತಾಲ್ಲೂಕಿನ ಗೋಣಿ ತುಮಕೂರಿನ ಹುಡುಗಿಯನ್ನ ತನ್ನ ಕಾಲೇಜು ದಿನಗಳಿಂದ ಪ್ರೀತಿಸುತ್ತಿದ್ದ ರಾಘವೇಂದ್ರ,ಮದುವೆಯಾಗಲು ಮನೆಯವರನ್ನ ಒಪ್ಪಿಸಿದ್ದ, ಆದರೇ ಇವರ ಪ್ರೇಮ ವಿವಾಹಕ್ಕೆ ಜಾತಿ ಅಡ್ಡಿ ಬಂದಿದ್ದು, ಯಾವಾಗ ತನ್ನ ಪ್ರೀತಿ ದಕ್ಕುವುದಿಲ್ಲ ಎಂದು ತಿಳಿಯಿತೋ, ಜಾತಿ ಜಾತಿ ಎಂದು ಯಾಕೆ ಸಾಯ್ತೀರಾ ಎಂದು ಪ್ರಶ್ನಿಸಿ, ತನ್ನ ನೋವಿನ ನುಡಿಗಳನ್ನ ವಿಡಿಯೋ ಮಾಡಿ ಫೇಸ್ ಬುಕ್ ಗೆ ಹಾಕಿ ಪ್ರಾಣಬಿಟ್ಟಿದ್ದಾನೆ.

 ರಾಘವೇಂದ್ರ ಗಾಣಿಗ ಶೆಟ್ಟಿ, ಅಶ್ವಿನಿ ಒಕ್ಕಲಿಗ ಜಾತಿಯಾಗಿದ್ದು,,ರಾಘವೇಂದ್ರ ಹಾಗೂ ಅಶ್ವಿನಿ ಪ್ರೇಮ ವಿವಾಹಕ್ಕೆ‌ ಜಾತಿ ಅಡ್ಡಿಬಂದಿದೆ. ರಾಘವೇಂದ್ರ ತಾಯಿ ಈ ವಿವಾಹಕ್ಕೆ ಒಪ್ಪಿದ್ದರು. ಆದರೇ ಅಶ್ವಿನಿ ತಂದೆ ಈ‌ ಮದುವೆಗೆ ನಿರಾಕರಿಸಿದ್ದರು.  ಕಳೆದ ಐದು ತಿಂಗಳ ಹಿಂದಷ್ಟೆ ಈ ವಿವಾಹ ಮಾತುಕತೆ ಮುರಿದುಬಿದ್ದಿದ್ದು, ರಾಘವೇಂದ್ರ ಅಂದಿನಿಂದ ಸುಮ್ಮನಾಗಿದ್ದಾನೆ. ವಾರದ ಹಿಂದೆ ಅಶ್ವಿನಿ ಮತ್ತೇ ರಾಘವೇಂದ್ರ ಜೊತೆ ಮಾತಾಡಿದ್ದು, ಈ‌ ಹಿನ್ನೆಲೆ ಮತ್ತೇ ಮನನೊಂದು ತಡರಾತ್ರಿ ನೇಣಿಗೆ ಶರಣಾಗಿದ್ದಾನೆ. ತನ್ನ ಒಬ್ಬನೇ ಮಗನನ್ನ ಕಳೆದುಕೊಂಡ ರಾಘವೇಂದ್ರ ತಾಯಿ ಹಾಗೂ ಸಂಬಂಧಿಕರ ರೋಧನೆ ಮುಗಿಲುಮುಟ್ಟಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments