ಮಾನಸ ಸರೋವರ ಯಾತ್ರೆಗೆ ತೆರಳಿದ್ದ ರಾಜ್ಯದ ಯಾತ್ರಿಗಳು ಸುರಕ್ಷಿತವಾಗಿದ್ದರೆಂಬ ಸುದ್ದಿಕೇಳಿ ಯಾತ್ರಿಗಳ ಕುಟುಂಬಸ್ಥರು ಇದೀಗ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
ಜೂಲೈ 27ರಂದು ರಾಜ್ಯದ ನಾನಾ ಕಡೆಗಳಿಂದ 250ಕ್ಕೂ ಹೆಚ್ಚು ಯಾತ್ರಾರ್ಥಿಗಳು ಮಾನವ ಸರೋವರಕ್ಕೆ ಪ್ರಯಾಣ ಬೆಳಸಿದ್ರು, ಮಾನಸ ಸರೋವರಕ್ಕೆ ತೆರಳಿದ್ದ ಯಾತ್ರಾರ್ಥಿಗಳ ಪೈಕಿ 35ಯಾತ್ರಿಗಳು ಮಂಡ್ಯದ ಮಳವಳ್ಳಿ ಭಾಗದವರಾಗಿದ್ದು, ಕಳೆದೆರಡುದಿನದಿಂದ ನೇಪಾಳದ ವಾತಾವರಣದಲ್ಲಾದ ವ್ಯತ್ಯಯದಿಂದಾಗಿ ಯಾತ್ರಿಗಳು ಯಾರ ಸಂಪರ್ಕಕ್ಕೂ ಸಿಗದೇ ಇದ್ದದ್ದು ಕುಟುಂಬಸ್ಥರನ್ನು ಚಿಂತೆಗೀಡು ಮಾಡಿತ್ತು.
ಆದ್ರೆ ಇದೀಗ ಯಾತ್ರಿಗಳು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ, ಮಳವಳ್ಳಿ ತಾಲ್ಲೂಕಿನ ಹಲಗೂರು ಗ್ರಾಮದಿಂದ ಮಾನಸ ಸರೋವರ ಯಾತ್ರೆಗೆ ತೆರಳಿದ್ದ ಮಂಜುನಾಥ್ ಈಗ ಕುಟುಂಬಸ್ಥರ ಸಂಪರ್ಕ ಸಿಕ್ತಿದ್ದಾರೆ, ಸ್ನೇಹಿತ ಅನಿಲ್ ರೊಂದಿಗೆ ದೂರವಾಣಿ ಕರೆ ಮೂಲಕ ಮಾತನಾಡಿರುವ ಯಾತ್ರಿ ಮಂಜುನಾಥ್ ಮಾನಸ ಸರೋವರಕ್ಕೆ ತೆರಳಿದ್ದ ಎಲ್ಲಾ ಯಾತ್ರಾರ್ಥಿಗಳು ಸುರಕ್ಷಿತವಾಗಿರುವ ಬಗ್ಗೆ ಮಾಹಿತಿ ನೀಡಿದ್ದು, ಇದ್ರಿಂದ ಯಾತ್ರಿಗಳ ಕುಟುಂಬಸ್ಥರು ಆತಂಕದಿಂದ ಹೊರಬಂದಿದ್ದಾರೆ.