Publish Date: Sun, 17 Sep 2023 (14:30 IST)
Updated Date: Sun, 17 Sep 2023 (14:04 IST)
ಮೈಸೂರಿನ ತಿಲಕ್ ನಗರದ ಕಚೇರಿಯಲ್ಲಿಯೇ ಆಹಾರ ಸುರಕ್ಷತಾ ಅಧಿಕಾರಿ ಲೋಕಾಯುಕ್ತ ಬಲೆಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಆಹಾರ ಸುರಕ್ಷತಾ ಅಧಿಕಾರಿ ಲೋಕೇಶ್, ಅಂಗಡಿ ಲೈಸೆನ್ಸ್ ರಿನಿವಲ್ ಮಾಡಿಕೊಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ನಂಜನಗೂಡಿನ ರಘು ಎಂಬುವವರ ಬಳಿ 7 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟು, ಗೂಗಲ್ ಪೇ ಮಾಡಿಸಿಕೊಂಡಿದ್ದರು. ಇದೇ ವೇಳೆ ದಾಳಿ ಮಾಡಿದ ಲೋಕಾಯುಕ್ತ ಅಧಿಕಾರಿಗಳು ಭ್ರಷ್ಟ ಅಧಿಕಾರಿಯನ್ನ ಸಾಕ್ಷಿ ಸಮೇತ ಸದೆ ಬಡಿದಿದ್ದಾರೆ. ಕಚೇರಿಯಲ್ಲಿದ್ದಾಗಲೇ ಲೋಕಾಯುಕ್ತ SP ಸುರೇಶ್ ಬಾಬು ಹಾಗೂ DySP ಕೃಷ್ಣಯ್ಯ ದಾಳಿ ಮಾಡಿದ್ದಾರೆ. 2015 ರಲ್ಲೂ ಲೋಕೇಶ್ ಮೇಲೆ ದಾಳಿ ಮಾಡಲಾಗಿತ್ತು.ಇದೀಗ ಎರಡನೇ ಬಾರಿ ಲಂಚ ಪಡೆದು ಲೋಕೇಶ್ ಸಿಕ್ಕಿಬಿದ್ದಿದ್ದಾರೆ.