Publish Date: Wed, 08 Mar 2023 (12:17 IST)
Updated Date: Wed, 08 Mar 2023 (12:49 IST)
ಬಿಜೆಪಿ ೪೦% ಪ್ರಕಾರ ೪೦ ಸೀಟಿಗೆ ಇಳಿದರೂ ಆಶ್ಚರ್ಯ ಇಲ್ಲ.ಈಗಿನ ಪ್ರಕಾರ ಅವರದ್ದು ೬೫ ಸೀಟಿಗಿಂತ ಮೇಲೆ ಏರ್ತಿಲ್ಲ.ಆದರೆ ಜನರ ಆಕ್ರೋಶ ನೋಡಿದರೆ ಅವರು ೪೦ ಸೀಟಿಗೆ ನಿಲ್ತಾರೆ ಅಂತ ಅನ್ಸತ್ತೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.
ಅಲ್ಲದೇ ಲೋಕಾಯುಕ್ತ ಶಕ್ತಿ ಕೊಡುವಲ್ಲಿ ಬಿಜೆಪಿ ಸಾಧನೆ ಏನು ಇಲ್ಲ.ಜನರು ಬಿಜೆಪಿ ಭ್ರಷ್ಟ ಸರ್ಕಾರ ತೆಗೆಯಲಿ ಎಂದು ಬಿಜೆಪಿ ವಿರುದ್ದ ಡಿಕೆಶಿ ವಾಗ್ದಾಳಿ ನಡೆಸಿದ್ದಾರೆ.
ಇನ್ನೂ ಮಾಡಳ್ ಮೆರವಣಿಗೆ ವಿಚಾರವಾಗಿ ಬಿಜೆಪಿ ಉತ್ತರ ಕೊಡಬೇಕು.ನನಗೆ ಆಶ್ಚರ್ಯ ಆಗಿದೆ, ಅವರ ಪಕ್ಷದ ಸಿದ್ದಾಂತ ಇದೆ.ಯಡಿಯೂರಪ್ಪ ಕೂಡ ಈಗ ಮಾತನಾಡುತ್ತಿದ್ದಾರೆ.ಕೋರ್ಟ್ ವಿಚಾರಕ್ಕೆ ನಾನು ಬಾಯಿ ಹಾಕಲ್ಲ.ಕೋರ್ಟ್ ಗೆ ಲೆಕ್ಕಾಚಾರ ಇರುತ್ತೆ, ಇದಕ್ಕೆ ಬಾಯಿ ಹಾಕಲ್ಲ.ಬಿಜೆಪಿ ಪಾರ್ಟಿ ಹೇಳಲಿ, ಸಮರ್ಥನೆ ಮಾಡಿಕೊಳ್ತಾ ಇದ್ರು.ಎಸಿಬಿ ತೆಗೆದು ಲೋಕಾಯುಕ್ತ ಶಕ್ತಿ ಕೊಡ್ತೇವೆ ಅಂತ ಹೇಳಲಿಲ್ಲ.ಕೋರ್ಟ್ ಹೇಳಿದ ಮೇಲೆ ಲೋಕಾಯುಕ್ತಕ್ಕೆ ಶಕ್ತಿ ಬಂದಿದೆ.ನಾಳೆ ಬಂದ್ ಗೆ ಕರೆ ಕೊಟ್ಟಿದ್ದೇವೆ.ಕಾರ್ಯಕರ್ತರು ಪ್ರತಿಭಟನೆ ಮಾಡ್ತಾರೆ.ಶಾಂತಿಯುತ ಬಂದ್ ಆಗುತ್ತೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.