Select Your Language

Notifications

webdunia
webdunia
webdunia
webdunia

ರಾಜಕಾರಣ ಬಿಟ್ಟು ಅಭಿವೃದ್ಧಿ ಬಗ್ಗೆ ಮಾತಾಡೋಣ- ಡಿಕೆಶಿ

Let's leave politics and talk about development
bangalore , ಶನಿವಾರ, 24 ಜೂನ್ 2023 (18:49 IST)
ಮುನಿಯಪ್ಪರಿಂದ ಕೇಂದ್ರ ಸಚಿವರ ಭೇಟಿ ವಿಚಾರವಾಗಿ ಡಿ‌ಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದು,ತೆಲಂಗಾಣ, ಪಂಜಾಬ್, ಆಂಧ್ರ ದಿಂದ ಅಕ್ಕಿ ಕೊಡುವ ಬಗ್ಗೆ ಹೇಳಿದ್ದಾರೆ.ಸರ್ಕಾರದ ಸಂಸ್ಥೆಗಳಿಂದ ಅಕ್ಕಿ ಪಡೆಯುವ ಕೆಲಸ ಮಾಡ್ತಿದ್ದೇವೆ.ಮುನಿಯಪ್ಪ ಸೆಂಟ್ರಲ್ ಮಿನಿಸ್ಟರ್ ಭೇಟಿ ಮಾಡ್ತಿದ್ದಾರೆ.ಗೋಯಲ್ ಜೊತೆ ಮಾತಾಡೋದಾಗಿ ಅಮಿತ್ ಶಾ ಭರವಸೆ ಕೊಟ್ಟಿದ್ದಾರೆ.ನೋಡೋಣ ಕಾಯೋಣ ಏನ್ ಮಾಡ್ತಾರೆ ಅಂತಾ ಈ ಸರ್ಕಾರ ಹಸಿದವರಿಗೆ ಸಹಾಯ ಮಾಡ್ತಿದೆ ಜನರು ಮಾತಾಡ್ತಿದ್ದಾರೆ.ನಮ್ಮ ಅಕ್ಕ ತಂಗಿ ಎಲ್ಲರೂ ಬಸ್ಸಿನಲ್ಲಿ ಓಡಾಡ್ತಿದ್ದಾರೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.
 
ಬೊಮ್ಮಾಯ- ಡಿಕೆಶಿ ಭೇಟಿ ವಿಚಾರವಾಗಿ ಹೌದಪ್ಪ ಬೊಮ್ಮಾಯಿ ಎರಡು ವರ್ಷ ಸಿಎಂ ಆಗಿ ಆಡಳಿತ ನಡೆಸಿದವರು.ಅವರ ಅನುಭವವನ್ನು ಕೇಳಿ ಮುಂದುವರೀಬೇಕು.ಹಿಂದೆ ದೇವೇಗೌಡ, ಎಸ್ ಎಂಕೆ ಎಲ್ಲರನ್ನು ಭೇಟಿ ಮಾಡಿದ್ದೇನೆ.ನಾನು ಕುಮಾರಣ್ಣನನ್ನೂ ಕೂಡ ಭೇಟಿ ಮಾಡಿ ಸಲಹೆ ಪಡೀತ್ತೀನಿ. ರಾಜಕಾರಣ ಬಿಟ್ಟು ಅಭಿವೃದ್ಧಿ ಬಗ್ಗೆ ಮಾತಾಡೋಣ ಎಂದು ಡಿಕೆಶಿವಕುಮಾರ್ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಅನ್ನಭಾಗ್ಯ ಯೋಜನೆಗೆ ಅಕ್ಕಿ ಇಲ್ಲವೆಂದ ಕೇಂದ್ರ..!