Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಅನ್ನಭಾಗ್ಯ ಯೋಜನೆಗೆ ಅಕ್ಕಿ ಇಲ್ಲವೆಂದ ಕೇಂದ್ರ..!

ಅನ್ನಭಾಗ್ಯ ಯೋಜನೆಗೆ ಅಕ್ಕಿ ಇಲ್ಲವೆಂದ ಕೇಂದ್ರ..!
bangalore , ಶನಿವಾರ, 24 ಜೂನ್ 2023 (18:32 IST)
ರಾಜ್ಯ ಸರ್ಕಾರದ ಅನ್ನಭಾಗ್ಯ ಯೋಜನೆಗೆ ಗರ ಬಡಿದಿದೆ..ಕೇಂದ್ರದಿಂದ ಅಕ್ಕಿ ಸಿಗುವ ದಾರಿ ಸಂಪೂರ್ಣ ಬಂದ್ ಆಗಿದೆ..ಬೇರೆ ಮೂಲಗಳಿಂದಲೇ ಅಕ್ಕಿ ಪಡೆಯಬೇಕಾದ ಅನಿವಾರ್ಯತೆ ಸರ್ಕಾರಕ್ಕೆ ಎದುರಾಗಿದೆ..ಹೀಗಾಗಿ ಯೋಜನೆ ಮತ್ತಷ್ಡು ವಿಳಂಬವಾಗಲಿದೆ..ಕಾಂಗ್ರೆಸ್ ಹಾಗೂ ಬಿಜೆಪಿ ನಡುವಿನ ವಾಕ್ಸಮರವೂ ಮುಂದುವರಿದಿದೆ.ಅನ್ನಭಾಗ್ಯ ಯೋಜನೆಗೆ ಅಕ್ಕಿಯನ್ನ ಕೊಡ್ತೇವೆಂದಿದ್ದ ಕೇಂದ್ರ ಸರ್ಕಾರ ನಂತರ ಕೈಕೊಟ್ಟಿತ್ತು..ಆ ನಂತರ ಕೇಂದ್ರದ ವಿರುದ್ಧ ಕೈ ನಾಯಕರು ನಿರಂತರ ವಾಗ್ದಾಳಿ ನಡೆಸಿದ್ದರು..ಇತ್ತ ಬಿಜೆಪಿ ನಾಯಕರು ರಾಜ್ಯ ಸರ್ಕಾರದ ವಿರುದ್ಧ ಗುಡುಗಿದ್ದರು..ಇದಾದ ಬಳಿಕ ಸಿಎಂ ದೆಹಲಿಯಲ್ಲಿ ಅಮಿತ್ ಶಾ ಭೇಟಿ ಮಾಡಿದ ನಂತ್ರ ಸಣ್ಣ ಆಸೆಯೊಂದು ಮೊಳಕೆಯೊಡೆದಿತ್ತು..ಅಮಿತ್ ಶಾ ಮಾತುಕೊಟ್ಟಿದ್ದಾರೆ..ಕೇಂದ್ರ ಆಹಾರ ಸಚಿವರ ಜೊತೆ ಮಾತನಾಡಿ ಅಕ್ಕಿ ಕೊಡಿಸ್ತಾರೆಂಬ ವಿಶ್ವಾಸ ಮೂಡಿತ್ತು..ಇಂದು ಕೇಂದ್ರ ಆಹಾರ ಪೂರೈಕೆ ಸಚಿವ ಪಿಯೂಷ್ ಗೋಯಲ್ ರಾಜ್ಯ ಆಹಾರ ಸಚಿವರನ್ನ ತುರ್ತು ದೆಹಲಿಗೆ ಆಹ್ವಾನಿಸಿದ್ದರು..ಹೀಗಾಗಿ ನಮಗೆ ಅಕ್ಕಿ ಸಿಗಲಿದೆ ಜುಲೈ ೧ ರಿಂದಲೇ ಜಾರಿ ಮಾಡಬಹುದೆಂಬ ಉತ್ಸಾಹದಿಂದ ಮುನಿಯಪ್ಪ ಬೆಳಗ್ಗೆಯೇ ದೆಹಲಿಗೆ ಹಾರಿದ್ದರು..ಗೋಯಲ್ ಭೇಟಿ ಮಾಡಿ ಅಕ್ಕಿಗೆ ಬೇಡಿಕೆ ಇಟ್ಟಿದ್ದರು..ಆದ್ರೆ ಎಲ್ಲ ಮಾತು ಕೇಳಿದ ನಂತರ ಅಕ್ಕಿ ಪೂರೈಕೆ ಕಷ್ಟ ಅನ್ನೋ ಸ್ಪಷ್ಟನೆ ಕೊಟ್ಟಿದ್ದಾರೆ..ಹೀಗಾಗಿ ಅಕ್ಕಿ ಸಿಗುವ ಕೇಂದ್ರದ ಬಾಗಿಲು ಸಂಪೂರ್ಣ ಬಂದ್ ಆಗಿದೆ.

ಇನ್ನು ಕೇಂದ್ರ ಆಹಾರ ಇಲಾಖೆಯ ತುರ್ತು ಬುಲಾವ್ ಹಿನ್ನೆಲೆಯಲ್ಲೇ ಇಂದು ಸಚಿವ ಮುನಿಯಪ್ಪ ತರಾತುರಿಯಲ್ಲಿ‌ದೆಹಲಿಗೆ ತೆರಳಿದ್ದರು..ದೆಹಲಿಯ ವಾಣಿಜ್ಯ ಭವನದಲ್ಲಿ ಪಿಯೂಷ್ ಗೋಯಲ್ ಭೇಟಿ ಮಾಡಿದ್ದರು..ಬಡವರ ಅಸಿವು ನೀಗಿಸುವ ಯೋಜನೆ ಜಾರಿಗೆ ತರ್ತಿದ್ದೇವೆ..ನಮಗೆ ಹೆಚ್ಚುವರಿ೨.೨೯ ಲಕ್ಷ ಮೆಟ್ರಿಕ್ ಟನ್ ಅಕ್ಕಿ ಅವಶ್ಯಕತೆಯಿದೆ..ಇದ್ರಲ್ಲಿ ಪರಸ್ಪರ ರಾಜಕಾರಣ ಮಾಡುವುದು ಬೇಡ..ಪಕ್ಷ ಯಾವುದೇ ಅಧಿಕಾರದಲ್ಲಿರಲಿ..ನೀವು ಬಡವರಿಗಾಗಿ ಅಕ್ಕಿಯನ್ನ‌ಪೂರೈಕೆ ಮಾಡಿ ಎಂದು ಮನವಿ ಮುಂದಿಟ್ಟರು..ಆದ್ರೆ ಅಕ್ಕಿ‌ಹೆಚ್ಚುವರಿ ದಾಸ್ತಾನಿಲ್ಲ..ರಾಜ್ಯಗಳ ಅಕ್ಕಿ‌ಪೂರೈಕೆ ನಿಯಮಗಳಿಗೆ ತಿದ್ದುಪಡಿಯಾಗಿದೆ..ಹಾಗಾಗಿ ಅಕ್ಕಿ ಪೂರೈಕೆ ಕಷ್ಟವಾಗಲಿದೆ ಎಂಬ ಉತ್ತರ ಅತ್ತ ಕಡೆಯಿಂದ ಬಂದಿದೆ..ಹೀಗಾಗಿ ಕೇಂದ್ರದಿಂದ ಅಕ್ಕಿ‌ಬರುವುದಿಲ್ಲವೆಂಬುದು ಸ್ಪಷ್ಟವಾಗಿದ್ದು,ಕೈ ನಾಯಕರು ಆಕ್ರೋಶ ಹೊರಹಾಕಿದ್ದಾರೆ

Share this Story:

Follow Webdunia kannada

ಮುಂದಿನ ಸುದ್ದಿ

ಅಕ್ಕಿ ವಿಚಾರಕ್ಕೆ ಸಚಿವರಾಗಿ ಮಾತನಾಡಲು ನಿರಾಕರಿಸಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್