Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಪೆನ್‌ಡ್ರೈವ್‌ ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣ ಬಂಧನವಾಗಲಿ: ಪ್ರಹ್ಲಾದ್ ಜೋಶಿ

Prahlad Joshi

Sampriya

ಹುಬ್ಬಳ್ಳಿ , ಭಾನುವಾರ, 5 ಮೇ 2024 (16:47 IST)
ಹುಬ್ಬಳ್ಳಿ: ಪೆನ್‌ಡ್ರೈವ್ ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣ ಬಂಧನವಾಗಲೇಬೇಕು. ವಿಡಿಯೋ ತಮ್ಮದಲ್ಲ ಎಂದು ಹೇಳಿದರೆ, ಆಗ ನಾವು ಅದನ್ನು ಎಫ್‌ಎಸ್ಎಲ್ ಕೊಡಲು ಒತ್ತಾಯಿಸುತ್ತೇವೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.

ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಹಾಗೂ ಸಂತ್ರಸ್ತ ಮಹಿಳೆಯ ಅಪಹರಣ ಪ್ರಕರಣದಲ್ಲಿ ರೇವಣ್ಣ ಬಂಧನದ ವಿಚಾರವಾಗಿ ಪ್ರತಿಕ್ರಿಯಿಸಿದರು.  

ವೀಡಿಯೋಗಳನ್ನು ಯಾರು ವೈರಲ್ ಮಾಡಿದ್ದಾರೆ ಎನ್ನುವುದಕ್ಕಿಂತ, ವಿಡಿಯೋ ಯಾರಿಗೆ ಸಿಕ್ಕಿದೆಯೋ ಅವರು ಬಿಡುಗಡೆ ಮಾಡಿರಬಹುದು. ಆದರೆ ಮಹಿಳೆಯರ ಜೊತೆಗೆ ಈ ರೀತಿಯಾಗಿ ನಡೆದುಕೊಂಡಿದ್ದು ಗಂಭೀರ ಅಪರಾಧ ಎಂದರು.

ಇನ್ನೂ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿಯಾಗಿರುವ ಹೆಚ್‌.ಡಿ.ರೇವಣ್ಣ ಬಗ್ಗೆ ಪ್ರತಿಕ್ರಿಯಿಸಿದ ಅವರು, ಕಾನೂನು ಕ್ರಮ ಕೈಗೊಳ್ಳುತ್ತಿದೆ. ದುರ್ದೈವ ರೇವಣ್ಣಗೆ ವಯಸ್ಸಾಗಿದೆ.‌ ಅವರ ಮೇಲೆ ಸಾಕಷ್ಟು ಆರೋಪ ಕೇಳಿಬಂದಿದೆ. ಹೀಗಾಗಿ ತನಿಖೆ ಮಾಡೋದು ಒಳ್ಳೆಯದು ಎಂದರು.


Share this Story:

Follow Webdunia kannada

ಮುಂದಿನ ಸುದ್ದಿ

ಪ್ರಜ್ವಲ್ ಪೆನ್‌ಡ್ರೈವ್ ಪ್ರಕರಣ: ಪ್ರಧಾನಿಗೆ 10 ಪ್ರಶ್ನೆ ಮುಂದಿಟ್ಟ ಕಾಂಗ್ರೆಸ್