Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ನನ್ನ ನಾಲಿಗೆಯಲ್ಲಿ ಉಲ್ಟಾ ಮಚ್ಚೆ ಇದೆ ಎಂಬ ನಂಬಿಕೆ ನಿಜವಾಗಲಿ; ಸಿದ್ದರಾಮಯ್ಯ

ನನ್ನ ನಾಲಿಗೆಯಲ್ಲಿ ಉಲ್ಟಾ ಮಚ್ಚೆ ಇದೆ ಎಂಬ ನಂಬಿಕೆ ನಿಜವಾಗಲಿ; ಸಿದ್ದರಾಮಯ್ಯ
ಬೆಂಗಳೂರು , ಮಂಗಳವಾರ, 17 ಆಗಸ್ಟ್ 2021 (14:18 IST)
ಬೆಂಗಳೂರು(ಆ.17): ಸಿದ್ದರಾಮಯ್ಯನವರ ನಾಲಿಗೆಯಲ್ಲಿ ಉಲ್ಟಾ ಮಚ್ಚೆ ಇದೆ. ಹೀಗಾಗಿ ಅವರು ಹೇಳಿದ್ದೆಲ್ಲಾ ಉಲ್ಟಾ ಆಗುತ್ತದೆ ಎಂದು ಹೇಳಿಕೆ ನೀಡಿದ್ದ ಬಿಜೆಪಿ ನಾಯಕ ಸಿ.ಟಿ.ರವಿ ವಿರುದ್ಧ ಮಾಜಿ ಸಿಎಂ ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ.

ಸಿ.ಟಿ.ರವಿ ಶೀಘ್ರ ಸಂಪುಟಕ್ಕೆ ಸೇರಲಿ, ಸಂಪುಟ ಸಚಿವರಾಗಲಿ ಎಂದು ಹಾರೈಸುತ್ತೇನೆ. ಆ ಮೂಲಕ ನನ್ನ ನಾಲಿಗೆ ಮೇಲೆ ಉಲ್ಟಾ ಮಚ್ಚೆ ಇದೆ ಎಂಬ ಸಿ.ಟಿ.ರವಿ ಅವರ ನಂಬಿಕೆ ನಿಜವಾಗಲಿ ಎಂದು ವ್ಯಂಗ್ಯವಾಡಿದ್ದಾರೆ.
ಟ್ವೀಟ್ ಮಾಡಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ ಸಿ.ಟಿ.ರವಿ ವಿರುದ್ಧ ಲೇವಡಿ ಮಾಡಿದ್ದಾರೆ. ಒಂದು ವೇಳೆ ಸಿದ್ದರಾಮಯ್ಯನವರ ನಾಲಿಗೆಯಲ್ಲಿ ಉಲ್ಟಾ ಮಚ್ಚೆ ಇದ್ದರೆ, ಅವರು ಸಿ.ಟಿ.ರವಿ ಸಂಪುಟಕ್ಕೆ ಸೇರಲಿ ಎಂದು ಹೇಳಿರುವ ಮಾತು ಸಹ ಉಲ್ಟಾ ಆಗುತ್ತದೆ. ಸಿ. ಟಿ. ರವಿ ಸಚಿವರಾಗುವುದಿಲ್ಲ ಎಂಬುದು ಈ ಟ್ವೀಟ್ನ ಅರ್ಥವಾಗಿದೆ.
ಮೊನ್ನೆ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸಿ.ಟಿ.ರವಿ ಚಿಕ್ಕಮಗಳೂರಿನಲ್ಲಿ ಮಾತನಾಡುತ್ತಾ, ಸಿದ್ದರಾಮಯ್ಯ ಹೇಳಿದ್ದು ಉಲ್ಟಾ ಆಗುತ್ತೆ, ಅವರ ನಾಲಗೆಯಲ್ಲಿ ಉಲ್ಟಾ ಮಚ್ಚೆ ಇದೆ ಎಂದು ವ್ಯಂಗ್ಯವಾಡಿದ್ದರು. ಸಿದ್ದರಾಮಯ್ಯ ಬಿಜೆಪಿ ಉಳಿಯಲ್ಲ ಅಂದಿದ್ದರು. ಆದರೆ ಈಗ ಮತ್ತೆ ಅಧಿಕಾರಕ್ಕೆ ಬಂದಿದೆ. ಈ ಅವಧಿ ಮುಗಿಸಿ ಮತ್ತೆ ಮುಂದಿನ 5 ವರ್ಷಕ್ಕೂ ಬಿಜೆಪಿ ಅಧಿಕಾರಕ್ಕೆ ಬರುತ್ತೆ ಎಂದು ಸಿದ್ದರಾಮಯ್ಯಗೆ ಸಿ.ಟಿ.ರವಿ ಟಾಂಗ್ ಕೊಟ್ಟಿದ್ದರು. ಅಪ್ಪನಾಣೆ ಮೋದಿ ಪ್ರಧಾನಿ ಆಗಲ್ಲ ಅಂತಾ ಸಿದ್ದರಾಮಯ್ಯ ಹೇಳಿದ್ದರು. ಆದ್ರೆ ಮೋದಿ 2 ಸಲ ಪ್ರಧಾನಿಯಾದರು. ಸಿದ್ದರಾಮಯ್ಯ ಏನು ಹೇಳುತ್ತಾರೋ ಅದು ಉಲ್ಟಾ ಆಗುತ್ತೆ. 2018ರಲ್ಲಿ ನಾನು ಮತ್ತೆ ಅಧಿಕಾರಕ್ಕೆ ಬಂದೇ ಬರ್ತೀನಿ ಅಂತಾಲೂ ಹೇಳಿದ್ರು.. ಬಂದ್ರಾ..? ಅಂತಾ ಸಿ.ಟಿ ರವಿ ಪ್ರಶ್ನೆ ಮಾಡಿದ್ದರು.
ಸಿದ್ದರಾಮಯ್ಯ ಕಾಲಜ್ಞಾನಿಯಲ್ಲ, ಅವರು ಹೇಳಿದ್ದು ತದ್ವಿರುದ್ದವಾಗಿ ನಡೆಯುತ್ತೆ. ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತೆ ಅಂದ್ರೆ ನೂರಕ್ಕೆ ನೂರಕ್ಕೆ ನೂರು ಕಾಂಗ್ರೆಸ್ ಬರಲ್ಲ. ಬಿಜೆಪಿ ಉಳಿಯಲ್ಲ ಅಂದ್ರೆ, ಈ ಅವಧಿ ಮುಗಿಸಿ ಮತ್ತೆ ಮುಂದಿನ 5 ವರ್ಷಕ್ಕೂ ಬರುತ್ತೆ. ಸಿದ್ದರಾಮಯ್ಯನವರ ಬಾಯಲ್ಲಿ ಉಲ್ಟಾ ಮಚ್ಚೆ ಇದೆ.  ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತೆ ಅಂದರೆ ನೂರಕ್ಕೆ ನೂರು ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ, ಬಿಜೆಪಿ ಉಳಿಯಲ್ಲ ಎಂದು ಹೇಳಿದರೆ ಮತ್ತೆ ಐದು ವರ್ಷ ಬಿಜೆಪಿ ಅಧಿಕಾರವನ್ನು ಹಿಡಿಯುತ್ತದೆ ಎಂದು ವ್ಯಂಗ್ಯವಾಗಿ ಉತ್ತರಿಸಿದರು.
ಕೆಲವರ ಬಾಯಲ್ಲಿ ಮಚ್ಚೆ ಇರುತ್ತದೆ ಅವರು ಹೇಳಿದ್ದು ನಡೆಯುತ್ತದೆ. ಆದರೆ ಸಿದ್ದರಾಮಯ್ಯ ಅವರ ನಾಲಿಗೆಯಲ್ಲಿ ಉಲ್ಟಾ ಮಚ್ಚೆ ಇರಬೇಕು, ಹಾಗಾಗಿ ಅವರು ಹೇಳಿದ್ದೆಲ್ಲಾ ಉಲ್ಟಾ ಆಗುತ್ತದೆ ಎಂದು ಹೇಳಿದರು. ಹಾಲಿ ಪ್ರಧಾನಿಗಳನ್ನು ಯಾರು ನರ ಹಂತಕ ಎಂದು ಕರೆದರೋ, ಅವರೇ ನನಗೆ ಸಂಸ್ಕೃತಿಯ ಪಾಠ ಹೇಳುವ ಕೆಲಸ ಮಾಡುತ್ತಿದ್ದಾರೆ. ಯಾರು ಪ್ರಜಾಪ್ರಭುತ್ವದ ಕತ್ತು ಹಿಸುಕಿ ತುರ್ತುಪರಿಸ್ಥಿತಿ ಹೇರಿದರೋ, ಅವರು ಪ್ರಜಾಪ್ರಭುತ್ವದ ಬಗ್ಗೆ ನಮಗೆ ಪಾಠ ಹೇಳುತ್ತಿದ್ದಾರೆ. ಯಾರು ಅಂಬೇಡ್ಕರ್ ಅವರನ್ನು ಎರಡು ಚುನಾವಣೆಯಲ್ಲಿ ಸೋಲಿಸಿದರೋ ಅವರು ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದರು.


Share this Story:

Follow Webdunia kannada

ಮುಂದಿನ ಸುದ್ದಿ

ರಾಜಧಾನಿಯಲ್ಲಿ ಎದುರಾಗಿದೆ ವ್ಯಾಕ್ಸಿನ್ ಕೊರತೆ