Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಖಜಾನೆಗಳಲ್ಲಿ ವರ್ಷಾಂತ್ಯದ ಬಿಲ್ಲುಗಳ ಲೆಕ್ಕ ಮುಕ್ತಾಯ ಮಾಡಲು ಕೊನೆ ದಿನದ ವಿವರ

ಖಜಾನೆಗಳಲ್ಲಿ ವರ್ಷಾಂತ್ಯದ ಬಿಲ್ಲುಗಳ ಲೆಕ್ಕ ಮುಕ್ತಾಯ ಮಾಡಲು ಕೊನೆ ದಿನದ ವಿವರ
bangalore , ಮಂಗಳವಾರ, 15 ಫೆಬ್ರವರಿ 2022 (20:14 IST)
2021-22ನೇ ಸಾಲಿನ ವರ್ಷಾಂತ್ಯದ ಬಿಲ್ಲುಗಳನ್ನು ಖಜಾನೆಗಳಲ್ಲಿ ಸ್ವೀಕರಿಸಿ ತೀರ್ಣಗೊಳಿಸಿ 2022 ರ ಮಾರ್ಚ್, 31 ರಂದೇ 2021-22 ನೇ ಸಾಲಿನ ಲೆಕ್ಕಗಳನ್ನು ಮುಕ್ತಾಯಗೊಳಿಸಲು ಆರ್ಥಿಕ ಇಲಾಖೆಯ ಸರ್ಕಾರದ ಉಪ ಕಾರ್ಯದರ್ಶಿ ಚಂದ್ರಶೇಖರ ನಾಯಕ್ ಅವರು ತಿಳಿಸಿದ್ದಾರೆ. 
ವೇತನ/ ವೇತನ ಬಾಕಿ ಬಿಲ್ಲುಗಳು, ಹಬ್ಬದ ಮುಂಗಡ ಬಿಲ್ಲು, ಅನುದಾನಿತ ವೇತನ ಬಿಲ್ಲುಗಳು, ಇತರೆ ಅನುದಾನಿತ ಬಿಲ್ಲುಗಳು, ಕಚೇರಿ ವೆಚ್ಚಗಳಿಗೆ ಸಂಬಂಧಿಸಿದಂತೆ ಸಾದಿಲ್ವಾರು ಬಿಲ್ಲುಗಳು, ಪ್ರಯಾಣ ವೆಚ್ಚ ಬಿಲ್ಲುಗಳು, ಇಎಪಿ ಕೇಂದ್ರ ಪುರಸ್ಕøತ ಹಾಗೂ ಕೇಂದ್ರ ಯೋಜನೆಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ಅನುದಾನ ಬಿಡುಗಡೆಯ ಬಿಲ್ಲುಗಳು, ವಿದ್ಯುತ್ಚ್ಛಕ್ತಿ, ದೂರವಾಣಿ ಹಾಗೂ ಕಟ್ಟಡ ಬಾಡಿಗೆಗೆ ಸಂಬಂಧಿಸಿದ ಬಿಲ್ಲುಗಳನ್ನು 2021 ರ ಡಿಸೆಂಬರ್, 31 ರವರೆಗೆ ಆಗಿರುವ ವೆಚ್ಚಗಳಿಗೆ ಸಂಬಂಧಿಸಿದಂತೆ ಬಿಲ್ಲು ಸಲ್ಲಿಸಲು ಇದೇ ಫೆಬ್ರವರಿ, 15 ಕಡೆ ದಿನವಾಗಿದೆ. 2021 ರ ಡಿಸೆಂಬರ್, 31 ರ ನಂತರ ಆಗಿರುವ ವೆಚ್ಚಗಳಿಗೆ ಸಂಬಂಧಿಸಿದಂತೆ ಬಿಲ್ಲುಗಳನ್ನು ಇದೇ ಮಾರ್ಚ್, 11 ರ ವರೆಗೆ ಸಲ್ಲಿಸಬಹುದಾಗಿದೆ. 
ಸಂಕ್ಷಿಪ್ತ ಸಾದಿಲ್ವಾರು ಬಿಲ್ಲುಗಳು ಹಾಗೂ ಇಎಪಿ, ಕೇಂದ್ರ ಪುರಸ್ಕøತ ಹಾಗೂ ಕೇಂದ್ರ ಯೋಜನೆ ಬಿಲ್ಲುಗಳನ್ನು 2021 ರ ಡಿಸೆಂಬರ್, 31 ರ ನಂತರ ಆಗಿರುವ ವೆಚ್ಚಗಳಿಗೆ ಸಂಬಂಧಿಸಿದಂತೆ ಬಿಲ್ಲು ಸಲ್ಲಿಸಲು ಇದೇ ಮಾರ್ಚ್, 19 ಕಡೆ ದಿನವಾಗಿದೆ. 
ಏಪ್ರಿಲ್ ತಿಂಗಳಲ್ಲಿ ಪಾವತಿಯಾಗುವ ಮಾರ್ಚ್ ತಿಂಗಳ ವೇತನ/ ವೇತನ ಅನುದಾನಿತ ಬಿಲ್ಲುಗಳು 2021 ರ ಡಿಸೆಂಬರ್, 31 ರವರೆಗೆ ಆಗಿರುವ ವೆಚ್ಚಗಳಿಗೆ ಸಂಬಂಧಿಸಿದಂತೆ ಬಿಲ್ಲು ಸಲ್ಲಿಸಲು 2022 ರ ಏಪ್ರಿಲ್, 02 ರ ನಂತರ. 
ಇಲಾಖೆಗಳು ಹಾಗೂ ಸಚಿವಾಲಯದ ಆಡಳಿತ ಇಲಾಖೆಗಳು ಹೊರಡಿಸುವ ಪುನರ್ವಿನಿಯೋಗದ ಬಿಲ್ಲು 2021 ರ ಡಿಸೆಂಬರ್, 31 ರವರೆಗೆ ಆಗಿರುವ ವೆಚ್ಚಗಳಿಗೆ ಸಂಬಂಧಿಸಿದಂತೆ ಬಿಲ್ಲು ಸಲ್ಲಿಸಲು ಇದೇ ಮಾರ್ಚ್, 19 ಕಡೆ ದಿನವಾಗಿದೆ. 
ಪೂರಕ ಅಂದಾಜು-3 ರಲ್ಲಿ ಸಕ್ರಮಗೊಳಿಸುವ ಹೆಚ್ಚುವರಿ ಆದೇಶದ ಬಿಲ್ಲುಗಳನ್ನು ಸಲ್ಲಿಸಲು ಇದೇ ಮಾರ್ಚ್, 24 ಕಡೆ ದಿನವಾಗಿದೆ. ಅಥವಾ ಆರ್ಥಿಕ ಇಲಾಖೆಯಿಂದ ಹೊರಡಿಸಲಾಗುವ ಆದೇಶಗಳ ಅನುಸಾರ. ಪೂರಕ ಅಂದಾಜು-3 ರಲ್ಲಿ ಒದಗಿಸಿರುವ ಅನುದಾನದ ಬಿಲ್ಲುಗಳನ್ನು ಇದೇ ಮಾರ್ಚ್, 24 ಅಥವಾ ಆರ್ಥಿಕ ಇಲಾಖೆಯಿಂದ ಹೊರಡಿಸಲಾಗುವ ಆದೇಶಗಳ ಅನುಸಾರ. 
ಜಿ.ಪಂ/ತಾ.ಪಂ. ವೇತನ, ವೇತನೇತರ ಮತ್ತು ಅನುದಾನಿತ(ಜಿಐಎ) ಬಿಲ್ಲುಗಳು (ಇಎಪಿ ಕೇಂದ್ರ ಪುರಸ್ಕøತ ಹಾಗೂ ಕೇಂದ್ರ ಯೋಜನೆಗಳನ್ನು ಹೊರತುಪಡಿಸಿ) ಸಲ್ಲಿಸಲು 2022 ರ ಮಾರ್ಚ್, 15 ಕಡೆ ದಿನವಾಗಿದೆ. 
2022 ರ ಮಾರ್ಚ್, 31 ರಂದು ಕಚೇರಿ ವ್ಯವಹಾರ ಅವಧಿ ಮುಗಿದ ನಂತರ ಯಾವುದೇ ಬಿಲ್ಲುಗಳನ್ನು ಖಜಾನೆಗಳಿಗೆ ಸಲ್ಲಿಸುವುದನ್ನು ನಿರ್ಬಂಧಿಸಲಾಗಿದೆ. ಇಲಾಖಾ ಮುಖ್ಯಸ್ಥರು ಮತ್ತು ಅವರುಗಳ ಹಣ ಪಡೆಯುವ ಮತ್ತು ಬಟವಾಡೆ ಮಾಡುವ ಅಧಿಕಾರಿಗಳು ಈ ಆದೇಶದಲ್ಲಿ ತಿಳಿಸಿರುವ ವೇಳಾ ಪಟ್ಟಿಯಂತೆ ಕ್ರಮ ಕೈಗೊಳ್ಳತಕ್ಕದ್ದು ಮತ್ತು ಆರ್ಥಿಕ ಮಿತವ್ಯಯ ಆದೇಶಗಳನ್ನು ಕಡ್ಡಾಯವಾಗಿ ಪಾಲಿಸಬೇಕು. 
ಸರ್ಕಾರದ ಆದೇಶದಂತೆ ಸೂಚನೆಗಳನ್ನು ಸಹ ಗಮನದಲ್ಲಿಟ್ಟುಕೊಂಡು ಮೇಲೆ ಹೇಳಿರುವ ಅಂಶಗಳನ್ನು ಗಣನೆಗೆ ತೆಗೆದುಕೊಂಡು ಆಯವ್ಯಯದಲ್ಲಿ ನಿಗದಿಪಡಿಸಿರುವ ಮೊತ್ತವನ್ನು 2022 ರ ಮಾರ್ಚ್, 31 ರೊಳಗೆ ವೆಚ್ಚ ಮಾಡತಕ್ಕದ್ದು. 
ಕಾಲಮಿತಿಯೊಳಗೆ ಪರಿಪೂರ್ಣವಾಗಿರುವ ಬಿಲ್ಲುಗಳನ್ನು ಸಲ್ಲಿಸಲು, ಇಲಾಖೆಗಳು ಎಲ್ಲಾ ಪೂರ್ವಸಿದ್ಧತೆಗಳನ್ನು ಮಾಡಿಕೊಳ್ಳುವುದು. ಡಿಎಸ್ಸಿ ಸಂಗ್ರಹಣೆ, ನವೀಕರಣ ಅನುದಾನ ಕೋರಿಕೆ, ಮ್ಯಾಪಿಂಗ್ ಮುಂತಾದ ಚಟುವಟಿಕೆಗಳನ್ನು ಮುಂಚಿತವಾಗಿ ಪರಿಶೀಲಿಸಿ ಯಾವುದೇ ತೊಂದರೆ, ವಿಳಂಬವಾಗದಂತೆ ಎಚ್ಚರಿಕೆ ವಹಿಸಬೇಕು. ಬಿಲ್ಲುಗಳನ್ನು ಸೆಳೆದು ಬ್ಯಾಂಕ್ ಅಥವಾ ವೈಯಕ್ತಿಕ ಠೇವಣಿ ಖಾತೆಗಳಲ್ಲಿ ಮೊತ್ತವನ್ನು ಜಮೆ ಮಾಡಲು ಆರ್ಥಿಕ ಇಲಾಖೆಯ ಲಿಖಿತ ಅನುಮತಿ ಅಗತ್ಯವಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯಪಾಲರ ಭಾಷಣಕ್ಕೆ ವಿಪಕ್ಷ ನಾಯಕ ಸಿದ್ದರಾಮಯ್ಯ ಕಟು ಟೀಕೆ