Publish Date: Sat, 31 Aug 2019 (18:15 IST)
Updated Date: Sat, 31 Aug 2019 (18:17 IST)
ವಿದೇಶದಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಜೂಜಿನ ವಿಚಾರಕ್ಕೆ ಪ್ರತಿಕ್ರಿಯೆ ನೀಡಿರೋ ಉಪಮುಖ್ಯಮಂತ್ರಿ, ಒಬ್ಬ ಮುಖ್ಯಮಂತ್ರಿಯಾದವರು ಈ ರೀತಿ ಮಾಡಿದ್ದರ ಬಗ್ಗೆ ಖೇದವಿದೆ ಅಂತ ಟಾಂಗ್ ನೀಡಿದ್ದಾರೆ.
ಅಥಣಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಉಪಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿ ಹೇಳಿಕೆ ನೀಡಿದ್ದು, ಬಿಜೆಪಿ ಸರ್ಕಾರ ಸರಿಯಿಲ್ಲ ಅನ್ನುವ ವಿರೋಧ ಪಕ್ಷಗಳ ಟೀಕೆಗಳಿಗೆ ಮಾನ್ಯತೆ ಇಲ್ಲ ಎಂದರು.
ನಮ್ಮ ಸರ್ಕಾರದ ಬಗ್ಗೆ ಟೀಕೆ ಮಾಡುತ್ತಿದ್ದಾರೆ. ಅವರ ಟೀಕೆಯಲ್ಲಿ ಹುರುಳಿಲ್ಲ, ಅರ್ಥವೂ ಇಲ್ಲ. ನಮ್ಮನ್ನು ಟೀಕಿಸುವ ನೈತಿಕ ಹಕ್ಕು ಅವರಿಗಿಲ್ಲ ಅಂತ ಜೆಡಿಎಸ್, ಕಾಂಗ್ರೆಸ್ ಗೆ ತಿರುಗೇಟು ನೀಡಿದ್ರು.
ಬಿಜೆಪಿ ಕಚೇರಿ ಮುಂದೆ ಕಾಂಗ್ರೆಸ್ ಮಹಿಳೆಯರ ಪ್ರತಿಭಟನೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಅದಕ್ಕೂ ಗರಂ ಆಗಿಯೇ ಟಾಂಗ್ ನೀಡಿದ್ದಾರೆ.
ಇನ್ನು, ಸಿದ್ದರಾಮಯ್ಯ ಕುಣಿಯಲು ಬರದವಳು ನೆಲ ಡೊಂಕೆಂದು ಹೇಳಿದಳೆಂಬ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿ,
ಸಿದ್ದರಾಮಯ್ಯ ನವರು ಹಿರಿಯರು. ಅವರು ಗೌರವಾನ್ವಿತರು ಅವರ ಬಾಯಲ್ಲಿ ಇಂತಹ ಮಾತು ಶೋಭೆ ತರುವದಿಲ್ಲ ಅಂತಂದ್ರು.