Publish Date: Mon, 05 Nov 2018 (15:01 IST)
Updated Date: Mon, 05 Nov 2018 (15:04 IST)
ಸಿಎಂ ಎಚ್.ಡಿ ಕುಮಾರಸ್ವಾಮಿ ಮೇಲೆ ಮೀ ಟೂ ಆರೋಪ ಮಾಡಿರುವ ಕುಮಾರ ಬಂಗಾರಪ್ಪ ಯೂಸ್ಲೇಸ್ ಫೆಲೋ. ಹೀಗಂತ ಶಾಸಕರೊಬ್ಬರೂ ಟೀಕೆ ಮಾಡಿದ್ದಾರೆ.
ನಾನು ಸಚಿವ ಸ್ಥಾನದ ಆಕಾಂಕ್ಷಿ. ಹೆಚ್.ಡಿ.ಕುಮಾರಣ್ಣ ಅವಕಾಶ ಕೊಟ್ಟರೆ ಮಂತ್ರಿಯಾಗಿ ಕೆಲಸ ಮಾಡ್ತೇನೆ ಎಂದು
ತುಮಕೂರಿನಲ್ಲಿ ಶಾಸಕ ಗೌರಿಶಂಕರ್ ಹೇಳಿಕೆ ನೀಡಿದ್ದಾರೆ.
ಸಚಿವ ಸ್ಥಾನ ಕೊಡದಿದ್ದರು ಅವರ ಶಿಷ್ಯನಾಗಿ ಕೆಲಸ ಮಾಡ್ತೇನೆ. ನನಗೆ ಸಚಿವ ಸ್ಥಾನ ಕೊಡುವಂತೆ ಕುಮಾರಣ್ಣನನ್ನು ಕೇಳಿದ್ದೆ. ಯುವಕರ ಕೋಟಾದಾಡಿ ಅವಕಾಶ ಕೊಡುವಂತೆ ಕೇಳಿದ್ದೆ ಎಂದರು.
ದೇವಾನು ದೇವತೆಗಳು, ಸ್ವಾಮೀಜಿಗಳು ನನ್ನ ಪರ ಇದ್ದಾರೆ. ಸಚಿವ ಸ್ಥಾನ ಸಿಗುವ ಭರವಸೆಯಿದೆ ಎಂದರು.
ಇನ್ನು ಸಿಎಂ ಎಚ್.ಡಿ ಕುಮಾರಸ್ವಾಮಿ ಮೇಲೆ ಮೀ ಟೂ ಆರೋಪ ಮಾಡಿರುವ ಕುಮಾರ ಬಂಗಾರಪ್ಪ ಯೂಸ್ಲೇಸ್ ಫೆಲೋ ಎಂದು ಹರಿಹಾಯ್ದರು.