ಬೆಂಗಳೂರು: ದೆಹಲಿಯಲ್ಲಿ ವಾಯುಮಾಲಿನ್ಯ ಮಿತಿ ಮೀರಿದ ಹಿನ್ನಲೆಯಲ್ಲಿ ವಾಹನಗಳ ಮೇಲೆ ಸರ್ಕಾರ ಹಲವು ನಿಬಂಧನೆಗಳನ್ನು ಹಾಕಿದೆ. ಇದೀಗ ರಾಜ್ಯ ರಾಜಧಾನಿ ಬೆಂಗಳೂರಿನಲ್ಲೂ ಅಂತಹದ್ದೇ ನಿಯಮಗಳು ಜಾರಿಗೆ ಬರಲಿವೆಯೇ?
ದೆಹಲಿಯಂತೆ ಬೆಂಗಳೂರಿನಲ್ಲೂ ವಾಯು ಮಾಲಿನ್ಯ ದಿನೇ ದಿನೇ ಹೆಚ್ಚುತ್ತಿದ್ದು, ಇದನ್ನು ನಿಯಂತ್ರಿಸಲು ಹೊಸ ವಾಹನ ಖರೀದಿಗೆ ಇನ್ನು ಎರಡು ವರ್ಷ ಅವಕಾಶ ನಿರಾಕರಿಸುವ ಆದೇಶವೊಂದನ್ನು ಹೊರಡಿಸಿದರೆ ಹೇಗೆ ಎಂದು ಸರ್ಕಾರ ಚಿಂತನೆ ನಡೆಸುತ್ತಿದೆ.
ಹೊಸ ವಾಹನಗಳ ನೋಂದಣಿಗೆ ಇನ್ನು ಎರಡು ವರ್ಷ ನಿರ್ಬಂಧ ವಿಧಿಸುವ ಕುರಿತಂತೆ ಚಿಂತನೆಗಳು ನಡೆಯುತ್ತಿವೆ ಎಂದು ನಗರಾಭಿವೃದ್ಧಿ ಸಚಿವರೂ ಆಗಿರುವ ಡಿಸಿಎಂ ಪರಮೇಶ್ವರ್ ಹೇಳಿದ್ದಾರೆ. ಇದೀಗ ಚರ್ಚೆಯ ಹಂತದಲ್ಲಿದೆಯಷ್ಟೇ. ಈ ಬಗ್ಗೆ ಇನ್ನೂ ನಿರ್ಧಾರ ತೆಗೆದುಕೊಂಡಿಲ್ಲ. ಇದರ ಸಾಧಕ ಬಾಧಕ ನೋಡಿ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದಿದ್ದಾರೆ. ಪ್ರಾಯೋಗಿಕವಾಗಿ ಮೊದಲು ಬೆಂಗಳೂರಿನಲ್ಲಿ ಈ ಕ್ರಮ ಜಾರಿಗೆ ತಂದು ನಂತರ ಉಳಿದ ನಗರಗಳಲ್ಲೂ ಇದೇ ನಿಯಮ ಜಾರಿಗೆ ತರಲು ಸರ್ಕಾರ ಚಿಂತನೆ ನಡೆಸಿದೆ ಎಂದು ಅವರು ಹೇಳಿಕೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.