Publish Date: Mon, 27 Feb 2023 (17:19 IST)
Updated Date: Mon, 27 Feb 2023 (17:21 IST)
ಶಿವಮೊಗ್ಗದಲ್ಲಿ ನೂತನ ಏರ್ಪೋರ್ಟ್ ಉದ್ಘಾಟನಾ ಸಮಾರಂಭದ ವೇದಿಕೆಯಲ್ಲಿ ಮೋದಿಗೆ ಶಾಲು ಹೊದಿಸಿ ಮಾಜಿ ಸಚಿವ ಈಶ್ವರಪ್ಪ ಸನ್ಮಾನಿಸಿದರು. ಮೋದಿಗೆ ಅಡಕೆ ಹಾರ ಹಾಕಿ ಸಂಸದ B.S. ರಾಘವೇಂದ್ರ ಸ್ವಾಗತಿಸಿದರು. ವಿಶೇಷ ಪೇಟ ತೊಡಿಸಿದ ಮಾಜಿ ಸಿಎಂ B.S.ಯಡಿಯೂರಪ್ಪ ಪ್ರಧಾನಿ ಮೋದಿಗೆ ಶಿವಮೊಗ್ಗ ಏರ್ಪೋರ್ಟ್ ಕಲಾಕೃತಿ ಕಾಣಿಕೆ ನೀಡಿದ್ರು. ಇದೇ ವೇದಿಕೆಯಲ್ಲಿ ಮಾಜಿ ಮುಖ್ಯಮಂತ್ರಿ B.S. ಯಡಿಯೂರಪ್ಪಗೆ ಪ್ರಧಾನಿ ನರೇಂದ್ರ ಮೋದಿ ಸನ್ಮಾನ ಮಾಡಿದರು. ಹಸಿರು ಶಾಲು ಹೊದಿಸಿ, ಅಡಕೆ ಹಾರ ಹಾಕಿ, ಪೇಟ ತೊಡಿಸಿ, ನೇಗಿಲು ನೀಡಿ ಸನ್ಮಾನಿಸಿದರು.