Publish Date: Mon, 27 Feb 2023 (16:03 IST)
Updated Date: Mon, 27 Feb 2023 (16:09 IST)
ಶಿವಮೊಗ್ಗದಲ್ಲಿ ಏರ್ಪೋರ್ಟ್ ಉದ್ಘಾಟನೆ ಬಳಿಕ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದ್ದು, ಹಲವು ವಿಷಯಗಳ ಕುರಿತು ಸರಾಗವಾಗಿ ಮಾತನಾಡಿದ್ರು. ಕರ್ನಾಟಕ ಹಳ್ಳಿಗಳ ಅಭಿವೃದ್ಧಿ ಕುರಿತು ಮೋದಿ ಮಾತನಾಡಿದ್ದಾರೆ. ಕರ್ನಾಟಕದಲ್ಲಿ ಅಭಿವೃದ್ಧಿಯ ರಥ ಸಾಗುತ್ತಿದೆ. ವಿಮಾನ, ರಸ್ತೆ, ರೈಲು ಮಾರ್ಗಗಳು ಅಭಿವೃದ್ಧಿಯಾಗ್ತಿದೆ. ಡಬಲ್ ಇಂಜಿನ್ ಸರ್ಕಾರದಿಂದ ಅಭಿವೃದ್ಧಿ ಪಥದತ್ತ ರಾಜ್ಯವು ಸಾಗ್ತಿದೆ ಎಂದರು. ಡಬಲ್ ಇಂಜಿನ್ ಸರ್ಕಾರದಿಂದ ಅಭಿವೃದ್ಧಿಯ ವೇಗ ಹೆಚ್ಚಾಗಲಿದೆ. ದೇಶದ ಪ್ರತಿಯೊಂದು ಹಳ್ಳಿಗಳು ಅಭಿವೃದ್ಧಿಯತ್ತ ಸಾಗ್ತಿದೆ ಎಂದು ಹೇಳಿದ್ರು.