ಕೊರೊನಾ ಲಾಕ್ ಡೌನ್ ಹಿನ್ನಲೆ ಕಳೆದ ಎರಡು ತಿಂಗಳನಿಂದ ಸಂಗಮನಾಥ ದೇವರಿಗೆ ದರ್ಶನ ಭಾಗ್ಯ ಬಂದ ಮಾಡಲಾಗಿತ್ತು. ಸರ್ಕಾರ ನಾಳೆ ಲಾಕ್ ಡೌನ್ ಓಪನ್ ಮಾಡಿದ ಹಿನ್ನಲೆ ದೇವಾಲಯಕ್ಕೂ ಅನುಮತಿ ದೂರಕಿದೆ.
ಈ ಹಿನ್ನೆಲೆಯಲ್ಲಿ ಪ್ರವಾಸಿ ತಾಣ ಹಾಗೂ ಧಾರ್ಮಿಕ ಕೇಂದ್ರವಾಗಿದ್ದ ಕೂಡಲಸಂಗಮ ದ ಸಂಗಮನಾಥ ದರ್ಶನ ಸಿಗಲಿದೆ.ಅಭಿವೃದ್ಧಿ ಪ್ರಾಧಿಕಾರ ಮಂಡಳಿ ವತಿಯಿಂದ ಸಿಬ್ಬಂದಿ ಗಳ ಮೂಲಕ ಸ್ವಚ್ಚತಾ ಕಾರ್ಯ ನಡೆಯುತ್ತಿದೆ. ಪ್ರಮುಖ ಸಂಚಾರದಲ್ಲಿ ಸ್ಯಾನಿಟೆಜರ್ ಸಿಂಪಡಣೆ ಮಾಡಿ ಸ್ವಚ್ಚತಾ ಕಾರ್ಯ ಮಾಡಲಾಗುತ್ತದೆ. ಕೃಷ್ಣ, ಘಟಪ್ರಭಾ ಹಾಗೂ ಮಲ್ಲಪ್ರಭಾ ಮೂರು ನದಿಗಳ ಸಂಗಮ ಆಗಿರುವುದರಿಂದ ರಾಜ್ಯ ಹಾಗೂ ಪರ ರಾಜ್ಯದಿಂದ ಸಾಕಷ್ಟು ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದರು.
ಕೊರೊನಾ ಹಿನ್ನಲೆ ಎಲ್ಲವೂ ಬಂದ ಆಗಿತ್ತು. ನಾಳೆ ಪ್ರಾರಂಭವಾದರೂ ಬೆಳ್ಳಿಗ್ಗೆ 6 ಗಂಟೆಯಿಂದ ಮಧ್ಯಾಹ್ನ 12 ಗಂಟೆಯವರೆಗೆ ಮತ್ತು ಮಧ್ಯಾಹ್ನ 3 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಮಾತ್ರ ಸಾರ್ವಜನಿಕರಿಗೆ ಪ್ರವೇಶ ಮಾಡಲಾಗಿದೆ. ತ್ರಿವೇಣಿ ಸಂಗಮ ನದಿಯಲ್ಲಿ ಸ್ಥಾನ ಮಾಡಲು ನಿಷೇಧ ಮಾಡಲಾಗಿದೆ.ನದಿಯ ದಡದಲ್ಲಿ ಸಿಬ್ಬಂದಿಗಳ ಕಾವಲು ಹಾಕಲಾಗಿದೆ.ಬರುವ ಭಕ್ತರು ಕಡ್ಡಾಯವಾಗಿ ಮಾಸ್ಕ ಹಾಗೂ ಸ್ಯಾನಿಟೆಜರ್ ಬಳಕೆ ಮಾಡಬೇಕು, ಸಾಮಾಜಿಕ ಅಂತರದಿಂದ ಸಂಗಮನಾಥನ ದರ್ಶನ ಪಡೆಯಬೇಕು ಎಂದು ಕೂಡಲಸಂಗಮ ಅಭಿವೃದ್ಧಿ ಪ್ರಾಧಿಕಾರ ಮಂಡಳಿ ಆಯುಕ್ತರಾದ ರಘುನಾಥ್ ಎ.ಇ ತಿಳಿಸಿದ್ದಾರೆ.