Publish Date: Wed, 12 Apr 2023 (16:30 IST)
Updated Date: Wed, 12 Apr 2023 (16:01 IST)
ಕೆ ಎಸ್ ಆರ್ ಟಿ ಸಿ ಟಿಕೆಟ್'ನಲ್ಲಿ 'ತಪ್ಪದೇ ಮತದಾನ' ಮಾಡುವಂತೆ ಜಾಗೃತಿ ಮೂಡಿಸಲಾಗಿದೆ.ಮೇ.10 ರಂದು ವಿಧಾನಸಭೆ ಚುನಾವಣೆ ಹಿನ್ನೆಲೆ ಕೆ ಎಸ್ ಆರ್ ಟಿ ಸಿ ಟಿಕೆಟ್ ನಲ್ಲಿ ತಪ್ಪದೇ ಮತದಾನ ಮಾಡಿ ಎಂಬುದಾಗಿ ಮುದ್ರಿಸುವ ಮೂಲಕ ಮತದಾನದ ಬಗ್ಗೆ ಜಾಗೃತಿ ಮೂಡಿಸಲಾಗಿದೆ.
ಕಳೆದ ಬಾರಿ ರಾಜ್ಯ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ KSRTC ನಿಗಮದಿಂದ ಮತದಾನ ಜಾಗೃತಿ ಮೂಡಿಸಿತ್ತು .ವಿವಿಧ ಬಗೆಯಲ್ಲಿ ಮತದಾನದ ಬಗ್ಗೆ ಜಾಗೃತಿ ಮೂಡಿಸುವಂತ ಕೊಟೇಶನ್ ಗಳನ್ನು ಟಿಕೆಟ್ ನಲ್ಲಿ ಮುದ್ರಿಸಲಾಗಿತ್ತು.ಇದೀಗ ಮತದಾನ ಜಾಗೃತಿ ಮೂಡಿಸಲು ksrtc ಟಿಕೆಟ್ ನಲ್ಲಿ ತಪ್ಪದೆ ಮತದಾನ ಮಾಡಿ ಎಂಬ ಸಂದೇಶ ಜನರಿಗೆ ಕೆ ಎಸ್ ಆರ್‌ಟಿಸಿ ತಲುಪಿಸುತ್ತಿದೆ.