Publish Date: Wed, 12 Apr 2023 (15:30 IST)
Updated Date: Wed, 12 Apr 2023 (15:32 IST)
ಬೆಂಗಳೂರಿನ ಆರ್ ಟಿ ನಗರದ ತಮ್ಮ ನಿವಾಸದಲ್ಲಿ ಮಾತನಾಡಿದ ಸಿಎಂ ಬಸವರಾಜ್ ಬೊಮ್ಮಾಯಿ 189 ಹೆಸರು ಘೋಷಣೆಯಾಗಿದೆ.ಬಹುತೇಕ ಎಲ್ಲಾ ಕ್ಷೇತ್ರದಲ್ಲಿ ಒಮ್ಮತದ ಸ್ವಾಗತವಾಗಿದೆ.ಕೆಲವು ಕ್ಷೇತ್ರದ ಆಕಾಂಕ್ಷಿಗಳು ಭೇಟಿ ಮಾಡಿದ್ದಾರೆ.ಲಕ್ಷ್ಮಣ್ ಸವದಿಯವರ ಜೊತೆ ಮಾತನಾಡಿದ್ದೇನೆ.ದುಡುಕಿ ನಿರ್ಧಾರ ತೆಗೆದುಕೊಳ್ಳಬೇಡಿ ಎಂದು ಹೇಳಿದ್ಧೇನೆ.ಪಕ್ಷದ ಜೊತೆಗೆ ಅವರಿಗೆ ನಂಟಿದೆ,ಒಡನಾಟವಿದೆ.ನೋವಿನಲ್ಲಿ ಮಾತನಾಡಿರಬಹುದು.ಅವರ ಕಷ್ಟದ ದಿನದಲ್ಲಿ ಪಕ್ಷ ಅವರ ಕೈ ಹಿಡಿದಿದೆ.ಪಕ್ಷ ಮುಂದಕ್ಕೂ ಕೈಹಿಡಿಯಲಿದೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ