Publish Date: Fri, 24 Apr 2020 (20:47 IST)
Updated Date: Fri, 24 Apr 2020 (20:49 IST)
ದೇಶಾದ್ಯಂತ ಲಾಕ್ ಡೌನ್ ಜಾರಿಯಲ್ಲಿರುವುದರಿಂದ ರಾಜ್ಯದಲ್ಲಿ ಕೆಪಿಎಸ್ ಸಿ ಪರೀಕ್ಷೆಗಳು ಮುಂದೂಡಲ್ಪಟ್ಟಿವೆ.
ಕೊರೊನಾ ವೈರಸ್ ತಡೆಗೆ ದೇಶದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ. ಮಹಾಮಾರಿ ಕೋವಿಡ್ -19 ನಿಯಂತ್ರಣಕ್ಕೆ ಕ್ರಮಗಳು ಜಾರಿಯಲ್ಲಿವೆ.
ಹೀಗಾಗಿ ಮೇ ಹಾಗೂ ಜೂನ್ ನಲ್ಲಿ ನಡೆಯಬೇಕಿದ್ದ ಕರ್ನಾಟಕ ಲೋಕಸೇವಾ ಆಯೋಗದ ವತಿಯಿಂದ ಹಲವು ವಿಭಾಗಗಳ ಹುದ್ದೆಗಳ ಭರ್ತಿಗಾಗಿ ನಡೆಯಲಿದ್ದ ಪರೀಕ್ಷೆಗಳನ್ನು ಮುಂದೂಡಿಕೆ ಮಾಡಲಾಗಿದೆ.
ಲಾಕ್ ಡೌನ್ ಪೂರ್ಣಗೊಂಡ ಬಳಿಕವಷ್ಟೇ ಪರೀಕ್ಷೆ ನಡೆಸಲು ಕೆಪಿಎಸ್ ಸಿ ತೀರ್ಮಾನ ಮಾಡಿದೆ.