Publish Date: Tue, 31 Mar 2020 (17:41 IST)
Updated Date: Tue, 31 Mar 2020 (17:44 IST)
ಜಾಗತಿಕವಾಗಿ ಸವಾಲಾಗಿರುವ ಕೊರೊನಾ ವೈರಸ್ ನಿಂದಾಗಿ ಏ. 22 ಕ್ಕೆ ನಿಗದಿಯಾಗಿದ್ದ ಸಿಇಟಿ ಪರೀಕ್ಷೆಯನ್ನು ಮತ್ತೆ ಮುಂದೂಡಲಾಗಿದೆ.
ಏ. 22 ರಿಂದ ಸಿಇಟಿ ಪರೀಕ್ಷೆಗಳು ಆರಂಭಗೊಂಡು ಏ.24ಕ್ಕೆ ಕೊನೆಗೊಳ್ಳಬೇಕಿತ್ತು. ಆದರೆ ಕೊರೊನಾ ವೈರಸ್ ಪೀಡಿತ ಕೇಸ್ ಗಳು ಹೆಚ್ಚಾಗುತ್ತಿರುವ ಕಾರಣದಿಂದಾಗಿ ಪರೀಕ್ಷೆಯನ್ನು ಮುಂದೂಡಿಕೆ ಮಾಡಲಾಗಿದೆ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಸಿಇಟಿ ಪರೀಕ್ಷೆಯನ್ನು ಮುಂದೂಡಿದ್ದು, ನೂತನವಾಗಿ ನಡೆಸಲಿರುವ ಪರೀಕ್ಷೆಯ ವೇಳಾಪಟ್ಟಿಯನ್ನು ನಂತರದಲ್ಲಿ ತಿಳಿಸಲಾಗುತ್ತಿದೆ ಎಂದು ಹೇಳಿದೆ.
Jagadeesh
Publish Date: Tue, 31 Mar 2020 (17:41 IST)
Updated Date: Tue, 31 Mar 2020 (17:44 IST)