ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಹೇಳಿಕೆಗೆ ಮಾಜಿ ಸಚಿವ ಆನಂದ್ ಅಸ್ನೋಟಿಕರ್ ತಿರುಗೇಟು ನೀಡಿದ್ದಾರೆ. ಪರೇಶ್ ಮೇಸ್ತ್ ವಿಷಯದಲ್ಲಿ ವಿನಾಕಾರಣ ರಾಜಕೀಯ ನಡೆಯುತ್ತಿದೆ. ಪರೇಶ್ ಮೇಸ್ತ್ ತಂದೆ ರಾಜಕೀಯ ಪಕ್ಷದ ವೇದಿಕೆಯಲ್ಲಿ ಗುರುತಿಸಿಕೊಳ್ಳುವಂತೆ ಮಾಡಿದ್ದು ಬಿ.ಜೆ.ಪಿ. ಹೀಗಾಗಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ರಾಜಕಾರಣ ಮಾಡಬೇಡಿ ಎಂದು ಸುದ್ದಿಗೋಷ್ಠಿಯಲ್ಲಿ ಮಾಜಿ ಸಚಿವ ಆನಂದ್ ಅಸ್ನೋಟಿಕರ್ ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.
ಉತ್ತರಕನ್ನಡ ಜಿಲ್ಲೆ ಶಾಂತಿಯುತವಾದ ಜಿಲ್ಲೆ. ಶಾಂತಿಕೆಡಿಸುವ ಕೆಲಸ ಮಾಡಬೇಡಿ. ಪರೇಶ್ ಮೇಸ್ತ್ ವಿಚಾರದಲ್ಲಿ ಕಳೆದ ಸರ್ಕಾರ ಸಿಬಿಐ ವಹಿಸಿದ್ದರೂ ಅದನ್ನ ಕಾಳಜಿ ವಹಿಸದೇ ಇರುವುದು ಕೇಂದ್ರ ಸರ್ಕಾರ. ಪರೇಶ ಪ್ರಕರಣದಲ್ಲಿ ಅಮಾಯಕರ ಮೇಲೆ ಪ್ರಕರಣ ದಾಖಲಾಗಿದೆ ಸರಕಾರದ ಮೂಲಕ ಕೇಸ್ ವಜಾಗೊಳಿಸುವ ಕೆಲಸ ಮಾಡುತ್ತೇನೆ ಎಂದರು.
ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿಯವರ ಮೇಲೆ ಗೌರವವಿದೆ ಅದನ್ನ ಉಳಿಸಿಕೊಳ್ಳಬೇಕು ಎಂದೂ ಅಸ್ನೋಟಿಕರ್ ಹೇಳಿದ್ದಾರೆ.