ಶಾಸಕರಲ್ಲದೇ ಇರುವವರು ರಾಜ್ಯದ ವಿವಿಧ ಕ್ಷೇತ್ರದಲ್ಲಿ ಉದ್ಘಾಟನೆ ಮಾಡುವುದು, ಅನುದಾನ ತರುವುದು, ವರ್ಗಾವಣೆ ಮಾಡುವ ಕೆಲಸ ಮಾಡುತ್ತಿದ್ದಾರೆ. ಈ ಬಗ್ಗೆ ಈಗಾಗಲೇ ಶಾಸನ ಸಭೆಯಲ್ಲಿಯೇ ಮುಖ್ಯಮಂತ್ರಿಗೆ ಮನವಿ ಮಾಡಿಕೊಂಡಿದ್ದೇವೆ. ಇದನ್ನು ಸರಕಾರ ಕೂಡಲೇ ನಿಲ್ಲಿಸಬೇಕು. ನಮ್ಮ ಶಾಸಕರ ಹಕ್ಕಿಗೆ ಧಕ್ಕೆಯಾದ್ರೇ ವಿರೋಧಿ ಪಕ್ಷವಾದ ಬಿಜೆಪಿ ಸರಕಾರವನ್ನು ಮಣಿಸಲು ಪ್ರಯತ್ನಿಸುವುದಾಗಿ ಕೋಟ ಶ್ರೀನಿವಾಸ ಪೂಜಾರಿ ಎಚ್ಚರಿಸಿದ್ದಾರೆ.
ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ರೈತರ ಸಾಲ ಸಂಪೂರ್ಣ ಮನ್ನಾ ಮಾಡುತ್ತೇನೆ ಎಂದು ಹೇಳಿ ಮಾತು ತಪ್ಪಿದ್ದಾರೆ ಎಂದು ವಿಧಾನ ಪರಿಷತ್ ನ ವಿರೋಧಿ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ ಹೇಳಿಕೆ ನೀಡಿದ್ದಾರೆ. ಕಾರವಾರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಶ್ರೀನಿವಾಸ ಪೂಜಾರಿ ರೈತರ ಸಾಲಮನ್ನಾ ಮಾಡುವುದಿರಲಿ, ಚಾಲ್ತಿ ಸಾಲ ಸೇರಿದಂತೆ ಸಾಲಮನ್ನಾ ಬಗ್ಗೆ ಸರಕಾರ ಈ ವರೆಗೂ ಅಧಿಕೃತವಾದ ಸುತ್ತೋಲೆಯನ್ನು ಹೊರಡಿಸಿಲ್ಲ ಎಂದು ಟೀಕೆ ಮಾಡಿದ್ದಾರೆ. ಕೂಡಲೇ ಸಾಲಮನ್ನಾ ಮಾಡುವ ಬಗ್ಗೆ ಸರಕಾರ ಅಧಿಕೃತವಾದ ಸುತ್ತೋಲೆ ಹೊರಡಿಸುವಂತೆ ಪೂಜಾರಿ ಆಗ್ರಹಿಸಿದ್ದಾರೆ.
ಪ್ರಜಾಪ್ರಭುತ್ವ ವ್ಯವಸ್ಥೆಯನ್ನು, ಮುಖ್ಯಮಂತ್ರಿಯನ್ನು ಪ್ರಶ್ನೆ ಮಾಡುವ ಹಕ್ಕು ಶಾಸಕರಿಗೆ ಇದೆ. ಆದರೆ ಶಾಸಕರಲ್ಲದೇ ಇರುವವರು ರಾಜ್ಯದ ವಿವಿಧ ಕ್ಷೇತ್ರದಲ್ಲಿ ಉದ್ಘಾಟನೆ ಮಾಡುವುದು, ಅನುದಾನ ತರುವುದು, ವರ್ಗಾವಣೆ ಮಾಡುವ ಕೆಲಸ ಮಾಡುತ್ತಿದ್ದಾರೆ. ಈ ಬಗ್ಗೆ ಈಗಾಗಲೇ ಶಾಸನ ಸಭೆಯಲ್ಲಿಯೇ ಮುಖ್ಯಮಂತ್ರಿಗೆ ಮನವಿ ಮಾಡಿಕೊಂಡಿದ್ದೇವೆ. ಇದನ್ನು ಸರಕಾರ ಕೂಡಲೇ ನಿಲ್ಲಿಸಬೇಕು. ನಮ್ಮ ಶಾಸಕರ ಹಕ್ಕಿಗೆ ಧಕ್ಕೆಯಾದ್ರೇ ವಿರೋಧಿ ಪಕ್ಷವಾದ ಬಿಜೆಪಿ ಸರಕಾರವನ್ನು ಮಣಿಸಲು ಪ್ರಯತ್ನಿಸುವುದಾಗಿ ಶ್ರೀನಿವಾಸ ಪೂಜಾರಿ ಎಚ್ಚರಿಸಿದ್ದಾರೆ.