ಕೊಡಗಿನಲ್ಲಿ ರಣಮಳೆಯಿಂದ ಕಂಗೆಟ್ಟ ನೆರೆ ಸಂತ್ರಸ್ತರಿಗೆ ಜಲಸಂಪನ್ಮೂಲ, ವೈದ್ಯಕೀಯ ಸಚಿವರ ಜಿಲ್ಲೆಯಿಂದ ನೆರವಿನ ಹಸ್ತ ಚಾಚಲಾಗಿದೆ.
ರಾಮನಗರ ಜಿಲ್ಲಾಡಳಿತದಿಂದ ಸಹಾಯ ಹಸ್ತ ಚಾಚಲಾಗಿದೆ. ಜಿಲ್ಲಾ ಉಸ್ತುವಾರಿ ಹಾಗೂ ಜಲಸಂಪನ್ಮೂಲ, ವೈದ್ಯಕೀಯ ಸಚಿವ ಡಿ.ಕೆ.ಶಿವಕುಮಾರ್, ರಾಮನಗರ ಜಿಲ್ಲಾಧಿಕಾರಿಗಳ ಕಚೇರಿಯಿಂದ 5 ಕ್ಯಾಂಟರ್ ನಲ್ಲಿ ಅಗತ್ಯ ಆಹಾರ ಹಾಗೂ ಔಷಧಿ ಪದಾರ್ಥಗಳು ಕೊಡಗಿನ ಕಡೆಗೆ ಪಯಣ ಬೆಳೆಸಿದ ವಾಹನಗಳಿಗೆ ಹಸಿರು ಬಾವುಟ ತೋರಿಸಿ ಚಾಲನೆ ಕೊಟ್ಟರು.
ಈ ವೇಳೆ ಜಿಲ್ಲಾಧಿಕಾರಿ ಡಾ.ಕೆ.ರಾಜೇಂದ್ರ ಸೇರಿದಂತೆ ಹಲವು ಅಧಿಕಾರಿಗಳು ಉಪಸ್ಥಿತಿ ಇದ್ದರು. ಕೊಡಗಿನ ಮಳೆ ಅವಾಂತರದ ಬಗ್ಗೆ ಮಾತನಾಡಿದ ಸಚಿವ ಡಿ.ಕೆ.ಶಿವಕುಮಾರ್, ಅಲ್ಲಿನ ಸಂತ್ರಸ್ತರಿಗೆ ರಾಮನಗರ ಜಿಲ್ಲೆಯಿಂದಲೂ ಹಲವು ಖಾಸಗಿ ಕಂಪನಿಗಳು, ಕಾರ್ಖಾನೆಗಳು ಹಾಗೂ ಸಾರ್ವಜನಿಕರು ಸಹಾಯ ಮಾಡಿದ್ದಾರೆ. ಈಗಾಗಲೇ ನೆರೆಯಲ್ಲಿ ಸಿಲುಕಿರುವ ಜನರ ರಕ್ಷಣಾ ಕಾರ್ಯ ಯಶಸ್ವಿಯಾಗಿ ನಡೆಯುತ್ತಿದೆ. ಮುಖ್ಯವಾಗಿ ಅವರಿಗೆ ಶಾಶ್ವತವಾಗಿ ಪರಿಹಾರ ಕಲ್ಪಿಸಲು ಸರ್ಕಾರ ಚಿಂತನೆ ನಡೆಸಿದೆ. ಹಾಗೇ ಯಾವ ಡ್ಯಾಂ ಗಳು ಬಿರುಕು ಬಿಟ್ಟಿಲ್ಲ, ಅದೆಲ್ಲವೂ ಕೇವಲ ಸುಳ್ಳುಸುದ್ದಿ ಅಷ್ಟೇ.
ಇನ್ನು ಈ ಬಗ್ಗೆ ವಂದತಿ ಹಬ್ಬಿಸಿದವರ ವಿರುದ್ಧ ಸೈಬರ್ ಕ್ರೈಮ್ ಗೂ ಕೂಡ ದೂರು ನೀಡಲಾಗಿದೆ. ಇದೇ ವಿಚಾರವಾಗಿ ಸಿಎಂ ಕೂಡ ರಿಪೋರ್ಟ್ ಕೇಳಿದ್ದಾರೆಂದು ಸಚಿವರು ತಿಳಿಸಿದ್ರು.