ನೂತನ ವರ್ಷಾಚಣೆಗೆ ಈ ಬಾರಿ ಗಾಳಿಪಟ ಉತ್ಸವದ ರಂಗು ಮತ್ತಷ್ಟು ಸಡಗರವನ್ನುಹೆಚ್ಚಿಸಲಿದೆ.
ಮಲ್ಪೆಸಮುದ್ರ ತೀರದಲ್ಲಿ ಡಿ.31ರಂದು ಬೀಚ್ ಗಾಳಿಪಟ ಉತ್ಸವ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ತಿಳಿಸಿದ್ದಾರೆ.
ಬೀಚ್ ಗಾಳಿಪಟ ಉತ್ಸವ ಏರ್ಪಡಿಸುವ ಕುರಿತ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಮಲ್ಪೆಬೀಚ್ ಅಭಿವೃದ್ದಿ ಸಮಿತಿ ವತಿಯಿಂದ ಮಲ್ಪೆ ಬೀಚ್ನಲ್ಲಿ ನಡೆಯುವ ಬೀಚ್ ಗಾಳಿಪಟ ಉತ್ಸವದಲ್ಲಿ ಸುಮಾರು 40 ಮಂದಿ ಬೆಳಗ್ಗೆ 10ರಿಂದ ಸಂಜೆ 6ರವರೆಗೆ ಅತ್ಯಾಕರ್ಷಕ ಮಾದರಿಯ ಗಾಳಿಪಟಗಳನ್ನು ಹಾರಿಸಲಿದ್ದಾರೆ.
ಸಂಜೆ 6ರಿಂದ 8 ಗಂಟೆಯವರೆಗೆ ಎಲ್.ಇ.ಡಿ ಬಲೂನ್ ಹಾರಾಟ ನಡೆಯಲಿದೆ ಎಂದರು. ಆಸಕ್ತರಿಗೆ ವಿವಿಧ ರೀತಿಯ ಗಾಳಿಪಟ ತಯಾರಿಸುವ ಕುರಿತು ಕಾರ್ಯಾಗಾರ ಹಾಗೂ ವಿಚಾರ ಸಂಕಿರಣ ನಡೆಯಲಿದೆ ಎಂದು ಮಾಹಿತಿ ನೀಡಿದರು.