ಸುಳ್ವಾಡಿ ಗ್ರಾಮದ ದೇವಸ್ಥಾನದಲ್ಲಿ ನಡೆದ ವಿಷಪ್ರಸಾದ ಪ್ರಕರಣದಲ್ಲಿ ಆರೋಪಿಗಳಿಗೆ ಕ್ರಿಮಿನಾಶಕ ನೀಡಿದ್ದ ಅಧಿಕಾರಿಯನ್ನು ವರ್ಗಾವಣೆ ಮಾಡಲಾಗಿದೆ.
ಕೃಷಿ ಅಧಿಕಾರಿ ಸಿದ್ದಯ್ಯ ಅವರನ್ನು ವರ್ಗಾವಣೆ ಮಾಡಲಾಗಿದೆ.
ವಿಷ ಪ್ರಸಾದ ಪ್ರಕರಣದಲ್ಲಿ ಪ್ರಸಾದ ಸೇವಿಸಿ 17 ಜನರು ಮೃತಪಟ್ಟಿದ್ದರು. ಕ್ರಿಮಿನಾಶಕವನ್ನು ಕೃಷಿ ಕೇಂದ್ರದ ಸಹಾಯಾಧಿಕಾರಿ ಸಿದ್ದಯ್ಯ ಸರಬರಾಜು ಮಾಡಿದ್ದಾಗಿ ಆರೋಪಿಗಳು ಪೊಲೀಸ್ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದರು.
ಈ ಕುರಿತು ತಮ್ಮ ಹೇಳಿಕೆ ನೀಡಿದ್ದ ಕೃಷಿ ಅಧಿಕಾರಿ ಸಿದ್ದಯ್ಯ, ಬೆಳೆಗಳಿಗೆ ಸಿಂಪಡಿಸಲು ಅಗತ್ಯವಿರುವುದರಿಂದ ಕೀಟನಾಶಕಗಳಿಗೆ ಬೇಡಿಕೆ ಇಟ್ಟಿದ್ದರು. ಈ ಹಿನ್ನೆಲೆ ನಾನು ಮಾನೋಕ್ರೋಟೊಪಾಸ್ ಕ್ರಿಮಿನಾಶಕವನ್ನು ನೀಡಿದ್ದಾಗಿ ತಿಳಿಸಿದ್ದರು.
ಇದರೊಂದಿಗೆ ಆರೋಪಿ ಅಂಬಿಕಾ ಅವಳೊಂದಿಗೆ ಕೃಷಿ ಅಧಿಕಾರಿ ಸಿದ್ದಯ್ಯ ಅವರಿಗೆ ಅನೈತಿಕ ಸಂಬಂಧವಿತ್ತು ಎಂದು ಕೆಲವು ಗ್ರಾಮಸ್ಥರು ಆರೋಪಿಸಿದ್ದರು. ಇದೀಗ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಕೃಷಿ ಇಲಾಖೆ ಉನ್ನತಾಧಿಕಾರಿಗಳು ಅಧಕಾರಿ ಸಿದ್ದಯ್ಯ ಅವರನ್ನು ಬೆಂಗಳೂರು ಕೇಂದ್ರ ಕೃಷಿ ಕಚೇರಿಗೆ ವರ್ಗಾಯಿಸಿದ್ದಾರೆ.