Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಮೂತ್ರ ವಿಸರ್ಜನೆ ಮಾಡಿದ್ದಕ್ಕೆ ಕಿರಿಕ್..ಹಲ್ಲೆ ಮಾಡಿ ಅಟ್ಟಹಾಸ

ಮೂತ್ರ ವಿಸರ್ಜನೆ ಮಾಡಿದ್ದಕ್ಕೆ ಕಿರಿಕ್..ಹಲ್ಲೆ ಮಾಡಿ ಅಟ್ಟಹಾಸ
bangalore , ಗುರುವಾರ, 2 ಮಾರ್ಚ್ 2023 (18:28 IST)
ಅದು ಬೆಂಗಳೂರಿನ‌ ಹೃದಯ ಭಾಗ ಮೆಜೆಸ್ಟಿಕ್.ಬೆಳಗ್ಗೆ 10 ಗಂಟೆಗೆ ಬಂದ ಅಂಗಡಿ ಮಾಲೀಕನಿಗೆ ಶಾಕ್ ಆಗಿತ್ತು.ಪಕ್ಕದಲ್ಲೇ ಇದ್ದ ಸಣ್ಣದೊಂದು ಗಲ್ಲಿಯಲ್ಲಿ ನಾಲ್ವರು ಎಲ್ಲೆಂದರಲ್ಲಿ ಬಿದ್ದಿದ್ರು.ಒಬ್ಬನ ತಲೆಯಿಂದ ರಕ್ತ ಹರಿತಿದೆ..ಇನ್ನೊಬ್ಬನ ಮೂಗು ತುಂಡಾಗಿದೆ..ಮತ್ತೊಬ್ಬನ ಕನ್ನೆಯ ಉಬ್ಬು ಕಿತ್ತು ಬಂದಿದೆ..ಮಗದೊಬ್ಬ ಪ್ರಾಜ್ಙಾಹೀನ ಸ್ಥಿತಿಯಲ್ಲಿ ಬಿದ್ದಿದ್ದು ಹೆಣವಾಗಿದ್ದಾನೆ..ಹೇಳ್ಬೇಕಂದ್ರೆ ನಾಲ್ವರ ಪಾಡು ನಿಜಕ್ಕೂ ಹೇಳೋದೇ ಬೇಡ.‌.ಈ ರೀತಿ ಅಟ್ಟಹಾಸ ಮೆರೆದಿದ್ದು ಅತ್ತಿಂದಿತ್ತ..ಇತ್ತಿಂದತ್ತ ಓಡಾಡ್ತಿದ್ದಾನಲ್ಲ ಇದೇ ಆಸಾಮಿ.

ಆಗಿದ್ದೇನಂದ್ರೆ ಸಂದೀಪ್,ರವಿ ,ಶಂಕರ್ ಮತ್ತು ಕೆಂಚ ನಾಲ್ವರು ಖಾಲಿ ಬಾಟಲ್ ಗಳನ್ನ ಆಯ್ದು ಮಾರಾಟ ಮಾಡೋ‌ ಕೆಲಸ ಮಾಡ್ತಿದ್ರು.ಸಂಜೆ ಆಗ್ತಿದ್ದಂತೆ ಎಣ್ಣೆ ಬಿಟ್ಕೊಂಡು ಮೆಜೆಸ್ಟಿಕ್ ಬಳಿ ಇರುವ ಕಪಾಲಿಗಲ್ಲಿಯಲ್ಲಿಯ ಇದೇ ಖಾಲಿ ಜಾಗದಲ್ಲಿ ನಿದ್ದೆಗೆ ಜಾರ್ತಿದ್ರು.ಹೀಗಿರ್ಬೇಕಾದ್ರೆ ಫೆಬ್ರವರಿ 28 ರ ರಾತ್ರಿ ಬಿರಿಯಾನಿ ಅಂಗಡಿಯಲ್ಲಿ ಕೆಲಸ ಮಾಡ್ತಿದ್ದ ಬಿಹಾರ ಮೂಲದ ಮೊಹಮ್ಮದ್ ತೆಹಸಿನ್ ನಾಲ್ವರು ಮಲಗಿದ್ದ ಖಾಲಿ ಜಾಗದ ಬಳಿ ಬಂದು ಮೂತ್ರ ವಿಸರ್ಜೆನೆ ಮಾಡಿದ್ದಾನೆ.ಈ ವೇಳೆ ನಾಲ್ವರು ಆತನಿಗೆ ಬೈದು ಒಂದೆರಡು ಏಟು ಕೊಟ್ಟು ಕಳುಹಿದ್ದಾರೆ.

ಹೀಗೆ ಹೊರಟವನು ಮಾರ್ಚ್ 1 ರ ಮುಂಜಾನೆ 3.30 ಕ್ಕೆ ಸರಿಯಾಗಿ ಕೈಯಲ್ಲೊಂದು ದೊಡ್ಡದಾದ ಮರದ ಕಟ್ಟಿಗೆ ಹಿಡಿದು ಬಂದಿದ್ದ.ಹೀಗೆ ಬಂದವನು ನಾಲ್ವರ ಮೇಲೆ ಪ್ರಹಾರ ನಡೆಸಿದ್ದ‌.ಮಲಗಿದ್ದವರ ಮೇಲೆ ಎರಗಿದ್ದ ಕಂಡ‌ ಕಂಡಲ್ಲಿ ಹಲ್ಲೆ ಮಾಡಿ ಎಸ್ಕೇಪ್ ಆಗಿದ್ದಾನೆ.ಬೆಳಗ್ಗೆ 10 ಗಂಟೆಗೆ ಘಟನಾ ಸ್ಥಳದ ಪಕ್ಕದಲ್ಲೇ ಇದ್ದ ಅಂಗಡಿಯೊಂದರ ಮಾಲೀಕ ಶಫೀಕ್ ಅಹಮ್ಮದ್ ಬಂದು ನೋಡಿದಾಗ ವಿಚಾರ ಗೊತ್ತಾಗಿದೆ.ನಾಲ್ವರಲ್ಲಿ ಸಂದೀಪ್ ಎಂಬಾತ ಸಾವನ್ನಪ್ಪಿದ್ರೆ,ಉಳಿದ ಮೂವರನ್ನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗ್ತಿದ್ದು.ಸ್ಥಿತಿ ಗಂಭೀರವಾಗಿದೆ.ಘಟನೆ ಸಂಬಂಧ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು.ಆರೋಪಿ ಮೊಹಮ್ಮ ತೆಹಸಿನ್ ಬಂಧಿಸಿದ್ದಾರೆ.ಏನೇ ಹೇಳಿ ಕ್ಷುಲ್ಲಕ ಕಾರಣಕ್ಕೆ ನಡೆದ ಗಲಾಟೆ ಓರ್ವನ ಪ್ರಾಣವನ್ನೇ ತೆಗೆಯುವಂತೆ ಮಾಡಿದ್ದು ನಿಜಕ್ಕೂ 
 

Share this Story:

Follow Webdunia kannada

ಮುಂದಿನ ಸುದ್ದಿ

ಮಹಿಳೆಯೊಬ್ಬಳನ್ನ ನಿರಂತರವಾಗಿ ಕಾಡ್ತಿದ್ದ ಕೀಚಕ..!