ಬೆಂಗಳೂರು: ಡಿಸೆಂಬರ್ 13ರಿಂದ ಆರಂಭವಾಗಬೇಕಿದ್ದ ಸಿಎಂ ಸಿದ್ದರಾಮಯ್ಯ ಅವರ ಜನಾಶೀರ್ವಾದ ಯಾತ್ರೆ ರದ್ದಾಗಿದೆ. ಪಕ್ಷದೊಳಗಿನ ಆಂತರಿಕ ಜಗಳವೇ ಇದಕ್ಕೆ ಕಾರಣವಂತೆ. ಯಾತ್ರೆ ಬದಲು ಡಿಸೆಂಬರ್ 13ರಿಂದ ತಾಲೂಕು, ಜಿಲ್ಲೆ ಪ್ರವಾಸ ಮಾಡುವುದರ ಕುರಿತು ಸಿಎಂ ನಿರ್ಧಾರ ಮಾಡಿದ್ದಾರೆ.
ಸಿ.ಎಂ ಹಾಗೂ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ನಡುವಿನ ಆತಂರಿಕ ಕಲಹದಿಂದ ಯಾತ್ರೆ ರದ್ದಾಗಿದೆ. ಸಿಎಂ ಯಾತ್ರೆಯಲ್ಲಿ ಪಾಲ್ಗೊಳ್ಳಲು ಪರಮೇಶ್ವರ್ ನಕಾರದ ಹಿನ್ನೆಲೆ ಈ ಯಾತ್ರೆ ರದ್ದಾಗಿದೆಯಂತೆ. ತಮ್ಮ ರಾಜಕೀಯ ವರ್ಚಸ್ಸು ಹೆಚ್ಚಿಸಿಕೊಳ್ಳಲು ಡಿಸೆಂಬರ್ 13ರಿಂದ ಜನಾಶ್ರೀರ್ವಾದ ಯಾತ್ರೆಯನ್ನು ಸಿಎಂ ಸಿದ್ದರಾಮಯ್ಯ ರೂಪಿಸಿದ್ದರು. ಆದರೀಗ ಪಕ್ಷದೊಳಗಿನ ಆಂತರಿಕ ಕಲಹದಿಂದ ಯಾತ್ರೆಯನ್ನು ಮಾರ್ಚ್ 1ಕ್ಕೆ ಮುಂದೂಡಲಾಗಿದೆ. ಕೊನೆಯ ಕ್ಷಣದಲ್ಲಿ ಈ ಯಾತ್ರೆಯನ್ನು ಸಿಎಂ ರದ್ದುಗೊಳಿಸಿದ್ದಾರೆ.
'ಯಾರೂ ಹೇಳಿದ್ದು ನಿಮಗೆ ಈಗ ಯಾತ್ರೆ ಮಾಡುತ್ತೇನೆ ಎಂದು, ಸದ್ಯಕ್ಕೆ ಯಾತ್ರೆ ಮಾಡುವುದಿಲ್ಲ ಮಾರ್ಚ್ 1ರಿಂದ ಯಾತ್ರೆ ನಡೆಯಲಿದೆ ಅಲ್ಲಿಯವರೆಗೆ ಜಿಲ್ಲೆ, ತಾಲೂಕು ಪ್ರವಾಸ ಮಾಡುತ್ತೇನೆ' ಎಂದು ಸಿಎಂ ಗೃಹ ಕಚೇರಿ ಕೃಷ್ಣದಲ್ಲಿ ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ