Publish Date: Tue, 09 Sep 2025 (08:35 IST)
Updated Date: Tue, 09 Sep 2025 (08:38 IST)
ಬೆಂಗಳೂರು: ರಾಜ್ಯಾದಲ್ಲಿ ಕಳೆದ ಎರಡು ದಿನಗಳಿಂದ ಮಳೆಯ ಅಬ್ಬರ ಕೊಂಚ ಕಡಿಮೆಯಾಗಿತ್ತು. ಇಂದೂ ಕೂಡಾ ರಾಜ್ಯದ ಕೆಲವೆಡೆ ಬಿಟ್ಟು ಉಳಿದೆಡೆ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ.
ರಾಜ್ಯದಲ್ಲಿ ಕಳೆದ ವಾರವಿಡೀ ಭಾರೀ ಮಳೆಯಾಗಿತ್ತು. ಆದರೆ ಈ ವಾರದ ಆರಂಭದ ಎರಡು ದಿನ ಅಷ್ಟಾಗಿ ಮಳೆಯ ಸೂಚನೆಯಿಲ್ಲ. ಕೆಲವು ಕಡೆ ಮಾತ್ರ ಸಾಧಾರಣ ಮಳೆ ಬಿಟ್ಟರೆ ಉಳಿದೆಡೆ ಬಿಸಿಲಿನ ವಾತಾವರಣವಿರಲಿದೆ. ಇಂದೂ ಅದೇ ಹವಾಮಾನ ಕಂಡುಬರುವುದು.
ಇಂದು ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಆದರೆ ಸತತ ಮಳೆಯಿಂದ ಹೈರಾಣಾಗಿದ್ದ ಕರಾವಳಿಯಲ್ಲಿ ಇಂದೂ ಕೂಡಾ ಮಳೆಯಾಗುವ ಸಾಧ್ಯತೆ ಕಡಿಮೆ. ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಇಂದು ಮಳೆಯ ಸೂಚನೆಯಿಲ್ಲ.
ಉಳಿದಂತೆ ಕೊಡಗು, ಹಾಸನ, ಚಿಕ್ಕಮಗಳೂರು, ಮೈಸೂರು, ಮಂಡ್ಯ, ಚಾಮರಾಜನಗರ, ತುಮಕೂರು, ಚಿತ್ರದುರ್ಗ, ಹಾವೇರಿ, ರಾಯಚೂರು, ಕೊಪ್ಪಳ ದಾವಣಗೆರೆ, ಬಾಗಲಕೋಟೆ, ಯಾದಗಿರಿ, ಬಳ್ಳಾರಿ, ಗದಗ, ಬೀದರ್, ವಿಜಯಪುರ, ಹುಬ್ಬಳ್ಳಿ, ಧಾರವಾಡ, ಬಿಸಿಲಿನ ವಾತಾವರಣವಿರಲಿದೆ. ಆದರೆ ಕೋಲಾರ, ರಾಮನಗರ, ಕಲಬುರಗಿ, ಬೆಳಗಾವಿ ಸೇರಿದಂತೆ ಕೆಲವೇ ಜಿಲ್ಲೆಗಳಲ್ಲಿ ಸಣ್ಣ ಮಳೆಯಾಗುವ ಸಾಧ್ಯತೆಯಿದೆ.