ಬೆಂಗಳೂರು: ಕರ್ನಾಟಕದಲ್ಲಿ ಕಳೆದ ವಾರವಿಡೀ ರಾಜ್ಯಾದ್ಯಂತ ಭಾರೀ ಮಳೆ ಕಂಡುಬಂದಿತ್ತು. ಈ ವಾರವೂ ಇರುತ್ತಾ ಮಳೆಯ ಅಬ್ಬರ ಇಲ್ಲಿದೆ ವಾರದ ಹವಾಮಾನ ವರದಿ.
ರಾಜ್ಯದಲ್ಲಿ ಕಳೆದ ವಾರ ವಾಯುಭಾರ ಕುಸಿತದ ಪರಿಣಾಮ ಬಹುತೇಕ ಕಡೆ ಮಳೆಯಾಗಿತ್ತು. ರಾಜ್ಯ ರಾಜಧಾನಿ ಬೆಂಗಳೂರು, ಕರಾವಳಿ ಜಿಲ್ಲೆಗಳು, ಮಲೆನಾಡಿನಲ್ಲಿ ಎಡೆಬಿಡದೇ ಮಳೆಯಾಗಿತ್ತು. ಇದು ವಾರಂತ್ಯದವರೆಗೂ ಮುಂದುವರಿದಿತ್ತು.
ಆದರೆ ಈ ವಾರ ರಾಜ್ಯಾದ್ಯಂತ ಮಳೆಯ ಅಬ್ಬರ ಕೊಂಚ ಮಟ್ಟಿಗೆ ಕಡಿಮೆಯಾಗಲಿದೆ. ವಾರದ ಕೊನೆಯಲ್ಲಿ ಮಾತ್ರ ಸ್ವಲ್ಪ ಮಳೆಯಾಗುವ ಸಾಧ್ಯತೆಯಿದೆಯಷ್ಟೇ. ವಾರದ ಆರಂಭದಲ್ಲಿ ಬಹುತೇಕ ಕಡೆ ಬಿಸಿಲಿನ ವಾತಾವರಣವಿರಲಿದೆ.
ಈ ಬಾರಿ ಅತೀ ಹೆಚ್ಚು ಮಳೆಯಾಗಿದ್ದು ಕರಾವಳಿ ಜಿಲ್ಲೆಗಳಲ್ಲಿ ಎನ್ನಬಹುದು. ಆದರೆ ಈ ವಾರ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲೂ ಮಳೆಯ ಅಬ್ಬರ ಕಡಿಮೆಯಾಗಲಿದೆ. ಚಿಕ್ಕಮಗಳೂರು, ಕೊಡಗು, ಹಾಸನ, ಮೈಸೂರು, ಚಾಮರಾಜನಗರ, ಮಂಡ್ಯ, ತುಮಕೂರು, ಚಿತ್ರದುರ್ಗ, ಹಾವೇರಿ
ಆದರೆ ಕೋಲಾರ, ಬೆಳಗಾವಿ, ವಿಜಯಪುರ, ಬಾಗಲಕೋಟೆ ಜಿಲ್ಲೆಗಳಲ್ಲಿ ವಾರದ ಆರಂಭದಲ್ಲಿ ಮಳೆಯಿರಲಿದೆ. ಬಳ್ಳಾರಿ, ರಾಯಚೂರು, ಗದಗ, ಬೀದರ್, ಕಲಬುರಗಿ, ಧಾರವಾಡ, ಹುಬ್ಬಳ್ಳಿ, ಕೊಪ್ಪಳ ಜಿಲ್ಲೆಗಳಲ್ಲಿ ವಾರದ ಮಧ್ಯಭಾಗದಿಂದ ಮಳೆ ಶುರುವಾಗಲಿದೆ. ಉಳಿದೆಡೆ ಅಲ್ಪಸ್ವಲ್ಪ ಮಳೆಯಾಗುವ ಸಾಧ್ಯತೆಯಿದೆ.