ಬೆಂಗಳೂರು: ಕೊರೋನಾ ಲಸಿಕೆ ಸಿಗುತ್ತಿಲ್ಲ ಎಂದು ಸಾರ್ವಜನಿಕರು ಪರದಾಡುತ್ತಿದ್ದರೂ ಸೆಲೆಬ್ರಿಟಿಗಳು ಮಾತ್ರ ಲಸಿಕೆ ಪಡೆದುಕೊಂಡ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ.
ಇದನ್ನು ನೋಡಿ ಕೆಲವು ನೆಟ್ಟಿಗರು, ನಾವು ಜನಸಾಮಾನ್ಯರು ಲಸಿಕೆ ಪಡೆಯಲು ಇಷ್ಟೊಂದು ಕಷ್ಟಪಡುತ್ತಿದ್ದೇವೆ. ವೆಬ್ ಸೈಟ್ ತೆರೆದರೆ ಯಾವತ್ತೂ ಫುಲ್ ಎಂದು ತೋರಿಸುತ್ತದೆ. ನಮಗೆ ಸಿಗದ ಲಸಿಕೆ ಸೆಲೆಬ್ರಿಟಿಗಳಿಗೆ ಮಾತ್ರ ಇಷ್ಟು ಸುಲಭವಾಗಿ ಹೇಗೆ ಸಿಗುತ್ತಿದೆ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.
ಹಾಗಿದ್ದರೆ ದುಡ್ಡು ಕೊಟ್ಟು ಹಾಕಿಸಿಕೊಳ್ಳುವ ಖಾಸಗಿ ಕೇಂದ್ರಗಳಿಗೆ ನಿರಂತರವಾಗಿ ಲಸಿಕೆ ಬರುತ್ತಿದೆಯೇ? ಉಚಿತವಾಗಿ ನೀಡುವ ಸರ್ಕಾರಿ ಕೇಂದ್ರಗಳಲ್ಲಿ ಬೇಕೆಂದೇ ಲಸಿಕೆ ಇಲ್ಲವೆನ್ನಲಾಗುತ್ತಿದೆಯೇ? ಇದೂ ಖಾಸಗಿ ಲಾಬಿಯೇ ಎಂದು ಹಲವರು ಸಾಮಾಜಿಕ ಜಾಲತಾಣಗಳಲ್ಲಿ ಅನುಮಾನ ವ್ಯಕ್ತಪಡಿಸಿದ್ದಾರೆ.