Publish Date: Thu, 07 Mar 2019 (09:28 IST)
Updated Date: Thu, 07 Mar 2019 (09:29 IST)
ಮುಂಬೈ: ನಾಗ್ಪುರದಲ್ಲಿ ನಡೆದ ದ್ವಿತೀಯ ಏಕದಿನ ಪಂದ್ಯದ ವೇಳೆ ಟೀಂ ಇಂಡಿಯಾ ಕ್ರಿಕೆಟಿಗ ಧೋನಿಯನ್ನು ಅಭಿಮಾನಿಯೊಬ್ಬ ಮೈದಾನದಲ್ಲೇ ಚೇಸ್ ಮಾಡಿದ ಘಟನೆ ತಮಾಷೆಯಾಗಿ ಕಂಡಿತ್ತು.
ಆದರೆ ಈ ಘಟನೆಯ ಬಳಿಕ ಕ್ರಿಕೆಟಿಗರಿಗೆ ನೀಡುತ್ತಿರುವ ಭದ್ರತೆ ಬಗ್ಗೆ ಮಾಜಿ ಆಟಗಾರ, ಕಾಮೆಂಟೇಟರ್ ಆಕಾಶ್ ಚೋಪ್ರಾ ಪ್ರಶ್ನೆ ಮಾಡಿದ್ದಾರೆ.
ಇಂತಹ ಘಟನೆ ಇದೇ ಮೊದಲಲ್ಲ. ಇತ್ತೀಚೆಗಿನ ದಿನಗಳಲ್ಲಿ ಧೋನಿ, ಕೊಹ್ಲಿಯಂತಹ ಸ್ಟಾರ್ ಆಟಗಾರರನ್ನು ಕೈಕುಲುಕಲು, ನಮಸ್ಕರಿಸಲು ಅಭಿಮಾನಿಗಳು ನೇರವಾಗಿ ಪಂದ್ಯದ ನಡುವೆ ಮೈದಾನಕ್ಕೆ ನುಗ್ಗುತ್ತಿರುವ ಘಟನೆ ಸಾಮಾನ್ಯವಾಗುತ್ತಿದೆ. ಧೋನಿ ಈ ರೀತಿ ಅಭಿಮಾನಿಯನ್ನು ಆಟ ಆಡಿಸುವ ಮೂಲಕ ಭದ್ರತಾ ಅಧಿಕಾರಿಗಳಿಗೆ ಚುರುಕು ಮುಟ್ಟಿಸಿದ್ದಾರೆ ಎಂದು ಚೋಪ್ರಾ ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.