Select Your Language

Notifications

webdunia
webdunia
webdunia
webdunia

ಕೈಗೆಟಕುತ್ತಿಲ್ಲ ಮೊಟ್ಟೆ, ದರ ಏರಿಕೆಗೆ ಇದೇ ಕಾರಣ

egg
Photo Credit X
ದೇಶ ಸೇರಿದಂತೆ ರಾಜ್ಯದಲ್ಲಿ ಈಚೆಗೆ ಮೊಟ್ಟೆ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ₹5 ರಿಂದ ₹6 ಇದ್ದ ಮೊಟ್ಟೆ ಬೆಲೆ ಇದೀಗ 8ಕ್ಕೆ ಏರಿಕೆಯಾಗಿದೆ. 

ಹಲವು ಕಾರಣಗಳ ನಡುವೆ ಕ್ರಿಸ್‌ಮಸ್‌ ಹಬ್ಬ ಕೂಡಾ ಒಂದಾಗಿದೆ. 

ಇನ್ನೂ ಕೋಳಿಗಳಿಗೆ ನೀಡುವ ಆಹಾರದ ಬೆಲೆ ಗಣನೀಯವಾಗಿ ಏರಿಕೆಯಾಗಿದೆ. ಮುಖ್ಯವಾಗಿ ಸೋಯಾಬೀನ್ ಮತ್ತು ಮೆಕ್ಕೆಜೋಳದ ಬೆಲೆಗಳು ಹೆಚ್ಚಾಗಿರುವುದರಿಂದ, ಕೋಳಿ ಸಾಕಾಣಿಕೆದಾರರಿಗೆ ಉತ್ಪಾದನಾ ವೆಚ್ಚ ಜಾಸ್ತಿಯಾಗಿದ್ದು, ಆದ್ದರಿಂದ ಮೊಟ್ಟೆ ಬೆಲೆ ಹೆಚ್ಚಾಗಿದೆ ಎನ್ನಲಾಗಿದೆ. 

ಇನ್ನೂ ಸಾಮಾನ್ಯವಾಗಿ ಚಳಿಗಾಲದಲ್ಲಿ ಮೊಟ್ಟೆಗಳಿಗೆ ಬೇಡಿಕೆ ಹೆಚ್ಚಿರುತ್ತದೆ. ಆರೋಗ್ಯವನ್ನು ಸಮಾತೋಲನದಲ್ಲಿಡಲು ಈ ಹವಾಮಾನಕ್ಕೆ ಹೆಚ್ಚಾಗಿ ಮೊಟ್ಟೆಯನ್ನು ಸೇವನೆ ಮಾಡುತ್ತಾರೆ. 


ವಾತಾವರಣದಲ್ಲಿನ ಏರುಪೇರು ಅಥವಾ ಅತಿಯಾದ ಚಳಿ ಇದ್ದಾಗ ಕೋಳಿಗಳು ಮೊಟ್ಟೆ ಇಡುವ ಸಾಮರ್ಥ್ಯ ಸ್ವಲ್ಪ ಕಡಿಮೆಯಾಗಬಹುದು. ಇದು ಮಾರುಕಟ್ಟೆಗೆ ಬರುವ ಮೊಟ್ಟೆಗಳ ಪ್ರಮಾಣವನ್ನು ತಗ್ಗಿಸುತ್ತದೆ.




Share this Story:

Follow Webdunia kannada

ಮುಂದಿನ ಸುದ್ದಿ

ರಾಷ್ಟ್ರ ರಾಜಧಾನಿಯಲ್ಲಿ ವಿಷಕಾರಿ ವಾಯು, ಮನೆಯಿಂದ ಹೊರಬರಲು ಜನರು ಹಿಂದೇಟು