Publish Date: Fri, 19 Dec 2025 (18:26 IST)
Updated Date: Fri, 19 Dec 2025 (18:28 IST)
ಚಿಕ್ಕಮಗಳೂರು: ಡಿಸೆಂಬರ್ 1ರಿಂದ 17ರ ವರೆಗೆ ಮಲೆನಾಡಿನ ಜಿಲ್ಲೆಗಳಾದ ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಯಾದ್ಯಂತ 10 ಮಂದಿಗೆ ಕೆಎಫ್‌ಡಿ ವೈರಲ್ ಸೋಂಕು ಕಾಣಿಸಿಕೊಂಡಿರುವುದು ಆತಂಕ ಹುಟ್ಟಿಸಿದೆ.
ಇದರಿಂದ 36 ಮಂಗಗಳು ಸತ್ತಿವೆ. ಇನ್ನೂ ರಾಜ್ಯದಲ್ಲಿ ಚಳಿಯ ತೀವ್ರತೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆ ಕಾಯಿಲೆವ್ಯಾಪಕಗೊಳ್ಳುತ್ತಿದೆ.
ವೈದ್ಯಕೀಯವಾಗಿ ಕ್ಯಾಸನೂರು ಅರಣ್ಯ ರೋಗ (ಕೆಎಫ್‌ಡಿ) ಎಂದು ಕರೆಯಲ್ಪಡುವ ಮಂಗನ ಕಾಯಿಲೆ ಪಶ್ಚಿಮ ಘಟ್ಟಗಳ ಕೆಲವು ಭಾಗಗಳಲ್ಲಿ ಕಂಡುಬರುವ ವೈರಲ್ ಸೋಂಕಾಗಿದೆ.
ಸತ್ತ ಕೋತಿಗಳಿಂದ ಈ ಸೋಂಕು ಹರಡುತ್ತದೆ. ಇದು ಹಠಾತ್ತನೆ ಪ್ರಾರಂಭವಾಗುವ ತೀವ್ರ ಜ್ವರ, ವಾಕರಿಕೆ, ವಾಂತಿ, ಅತಿಸಾರ, ನರವೈಜ್ಞಾನಿಕ ಹಾಗೂ ರಕ್ತಸ್ರಾವ ಸಂಬಂಧಿತ ಲಕ್ಷಣಗಳೊಂದಿಗೆ ಕೂಡಿದೆ.
ಈ ಕಾಯಿಲೆ ಮಂಗನಿಂದ ನೇರವಾಗಿ ಮನುಷ್ಯನಿಗೆ ಹರಡುವುದಿಲ್ಲ. ಬದಲಾಗಿ ಅರಣ್ಯ ಉಣ್ಣೆಗಳ ಮುಲಕ ಇದು ಹರಡುತ್ತದೆ.
ಸತ್ತ ಸೋಂಕಿತ ಕೋತಿಗಳ ಸಂಪರ್ಕದಿಂದ ಮನುಷ್ಯರಿಗೆ ಈ ಸೋಂಕು ಹರಡುತ್ತದೆ. ಆದಾಗ್ಯೂ, ಈ ಜ್ವರವು ಮನುಷ್ಯರಿಂದ ಮನುಷ್ಯರಿಗೆ ಹರಡುವುದಿಲ್ಲ. ಈ ಜ್ವರದ ಸಂಭವ ಸಾಮಾನ್ಯವಾಗಿ ಅಕ್ಟೋಬರ್ ಅಥವಾ ನವೆಂಬರ್‌ನಲ್ಲಿ ಪ್ರಾರಂಭವಾಗಿ ಜನವರಿ ಮತ್ತು ಏಪ್ರಿಲ್ ನಡುವೆ ಉತ್ತುಂಗವನ್ನು ತಲುಪುತ್ತದೆ.