Select Your Language

Notifications

webdunia
webdunia
webdunia
webdunia

ಸಿದ್ದರಾಮಯ್ಯ ಬ್ರೇಕ್‌ಫಾಸ್ಟ್‌ ಮೀಟಿಂಗ್‌ಗೆ ಹೋಗುತ್ತಿದ್ದ ಹಾಗೇ ಡಿಕೆ ಶಿವಕುಮಾರ್ ಮನೆ ಎದುರು ಅಚ್ಚರಿ ಘಟನೆ, Video

DCM DK Shivkumar
Photo Credit X
ಬೆಂಗಳೂರು: ಸಿಎಂ ಸಿದ್ದರಾಮಯ್ಯ ಅವರು ಬ್ರೇಕ್‌ಫಾಸ್ಟ್‌ ಮೀಟಿಂಗ್ ಹಮ್ಮಿಕೊಳ್ಳುತ್ತಿರುವ ನಡುವೆ ಡಿಸಿಎಂ ಡಿಕೆ ಶಿವಕುಮಾರ್ ಮನೆ ಮುಂದೆ ಅವರ ಅಭಿಮಾನಿಗಳು ಸಿಹಿ ಹಂಚಿ ಸಂಭ್ರಮಿಸುತ್ತಿದ್ದಾರೆ. ಇದರ ವಿಡಿಯೋ ಕೂಡಾ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ಈ ಎಲ್ಲ ಬೆಳವಣಿಗೆ ನೋಡಿದ್ರೆ ಬ್ರೇಕ್‌ಫಾಸ್ಟ್ ಮೀಟಿಂಗ್ ಬಳಿಕ ಸಿದ್ದರಾಮಯ್ಯ ರಾಜೀನಾಮೆ ನೀಡುತ್ತಿರುವುದು ಪಕ್ಕಾ ಆಗಿದ್ದು, ಶಿವಕುಮಾರ್ ಮುಂದಿನ ಸಿಎಂ ಆಗಿ ಪಟ್ಟಕೇರುವುದು ಖಚಿತವಾಗಿದೆ. ಎರಡು ನಾಯಕರ ಕಚೇರಿ ಹಾಗೂ ಮನೆ ಮುಂದಿನ ಬೆಳವಣಿಗೆ ನೋಡಿದ್ರೆ, ಮುಂದಿನ ರಾಜ್ಯ ರಾಜಕಾರಣದ ಚಿತ್ರಣ ಸಂಪೂರ್ಣವಾಗಿ ಸಿಗುತ್ತಿದೆ. 

ಹೈಕಮಾಂಡ್ ಭೇಟಿ ಬಳಿಕ ಸಿದ್ದರಾಮಯ್ಯ ಅವರು ರಾಜ್ಯ ಸಿಎಂ ಹುದ್ದೆಗೆ ರಾಜೀನಾಮೆ ನೀಡುತ್ತಿರುವ ವದಂತಿ ನಡುವೆ ಸಿದ್ದರಾಮಯ್ಯ ಇಂದು ತಮ್ಮ ಕಾವೇರಿ ಸಿಎಂ ನಿವಾಸದಲ್ಲಿ ಬ್ರೇಕ್‌ಫಾಸ್ಟ್ ಮೀಟಿಂಗ್ ಕರೆದಿದ್ದಾರೆ. 

ಈಗಾಗಲೇ ಡಿಸಿಎಂ ಡಿಕೆ ಶಿವಕುಮಾರ್‌, ಸಚಿವರಾದ  ಲಕ್ಷ್ಮಿ ಹೆಬ್ಬಾಳ್ಕರ್‌, ಎಂ ಬಿ ಪಾಟೀಲ್‌ ಸೇರಿದಂತೆ ಎಲ್ಲ ಸಚಿವರು ಆಗಮಿಸುತ್ತಿದ್ದಾರೆ. ಈ ಸಭೆಯಲ್ಲಿ ಸಿದ್ದರಾಮಯ್ಯ ತಮ್ಮ ನಡೆಯನ್ನು ಹೇಳ, ಆ ಬಳಿಕ ರಾಜೀನಾಮೆ ಘೋಷಿಸುವ ಸಾಧ್ಯತೆಯಿದೆ ಎನ್ನಲಾಗಿದೆ. 


Share this Story:

Follow Webdunia kannada

ಮುಂದಿನ ಸುದ್ದಿ

ಹಂಪಿಯ ವಿರೂಪಾಕ್ಷದೇಗುಲ ಆನೆಯ ಸ್ಥಳಾಂತರ ಕ್ಷಣ ಎಂತವರಿಗೂ ಕಣ್ಣೀರು ತರಿಸುತ್ತದೆ, Video