Select Your Language

Notifications

webdunia
webdunia
webdunia
webdunia

ಸೌಹಾರ್ದ ಬ್ಯಾಂಕ್ ನ ಕರ್ಮಕಾಂಡ ಬಯಲು

Karmakanda Bayalu of Souharda Bank
bangalore , ಬುಧವಾರ, 9 ನವೆಂಬರ್ 2022 (13:50 IST)
ರಾಜಧಾನಿಯಲ್ಲಿ ಮತ್ತೊಂದು ಸೌಹಾರ್ದ ಬ್ಯಾಂಕ್ ನ ಕರ್ಮಕಾಂಡ ಬಯಲಾಗಿದೆ. ಠೇವಣಿದಾರರ ಹಣವನ್ನ ದುರ್ಬಳಕೆ‌ ಮಾಡಿಕೊಂಡು  ಕುರುಹಿನ ಶೆಟ್ಟಿ ಸೌಹಾರ್ದ ಸಹಕಾರ ಬ್ಯಾಂಕ್ ನಲ್ಲಿದ್ದ  ಕೋಟ್ಯಂತರ ರೂಪಾಯಿ ಸಾಲ ನೀಡಿ ಆರ್ಥಿಕ ದಿವಾಳಿಗೆ ನೂಕಿ ಅಕ್ರಮವೆಸಗಿದ್ದ ಆರೋಪದಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸೇರಿ ಐವರನ್ನು ಕೆಂಪೇಗೌಡನಗರ ಪೊಲೀಸರು ಬಂಧಿಸಿದ್ದಾರೆ.
 
ಬ್ಯಾಂಕ್ ಮಾಜಿ ಅಧ್ಯಕ್ಷ ಶ್ರೀನಿವಾಸ್, ಉಪಾಧ್ಯಕ್ಷ ಈಶ್ವರಪ್ಪ, ಸಾಲಗಾರರಾದ ದಯಾನಂದ್, ಚಂದ್ರಶೇಖರ್ ಹಾಗೂ ಸುರಬಿ ಚಿಟ್ಸ್ ಮಾಲೀಕ ಬಿ.ಟಿ.ಮೋಹನ್ ಎಂಬುವರನ್ನು ಬಂಧಿಸಲಾಗಿದೆ‌.
ಕೆ.ಜೆ.ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಕುರುಹಿನ ಶೆಟ್ಟಿ ಬ್ಯಾಂಕ್ ನಲ್ಲಿ 2011 ರಿಂದ 22ರವರೆಗೆ ಶ್ರೀನಿವಾಸ್ ಅಧ್ಯಕ್ಷನಾಗಿ ಕಾರ್ಯನಿರ್ವಹಿಸಿದ್ದರು‌‌. ನೂರಾರು ಗ್ರಾಹಕರು ಠೇವಣಿ ರೂಪದಲ್ಲಿ ಬಂದಿದ್ದ ಕೋಟ್ಯಂತರ ರೂಪಾಯಿ ಹಣವನ್ನ ಸಾಲ ಮಂಜೂರಾತಿ ಸಮಿತಿ ಅಧಿಕಾರಿಗಳ ಮುಖಾಂತರ ದಾಖಲಾತಿ ಪರಿಶೀಲಿಸದೆ ಸಾಲ ಮಂಜೂರು ಮಾಡಿಸಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ರಾಜಧಾನಿಗೆ ಪ್ರಧಾನಿ ನರೇಂದ್ರ ಮೋದಿ ಆಗಮನ