Daily Horoscope

Select Your Language

Notifications

webdunia
webdunia
webdunia
webdunia

‘ಕೈ’ ಶೋಷಿತರನ್ನ ಮತ ಬ್ಯಾಂಕ್ ಮಾಡಿಕೊಂಡಿತ್ತು’

‘ಕೈ’ ಶೋಷಿತರನ್ನ ಮತ ಬ್ಯಾಂಕ್ ಮಾಡಿಕೊಂಡಿತ್ತು’
ಕಾಂಗ್ರೆಸ್ ದಶಕಗಳ ಕಾಲ ಶೋಷಿತರನ್ನ ಮತ ಬ್ಯಾಂಕ್ ಆಗಿ ಮಾಡಿಕೊಂಡಿತ್ತು.. ಆದರೆ ನಮ್ಮ ಸರ್ಕಾರ SC/ST, ಹಿಂದುಳಿದ ವರ್ಗಗಳು, ಲಿಂಗಾಯತ ಸಮುದಾಯ ಸೇರಿದಂತೆ ಇತರೆ ಸಮುದಾಯಕ್ಕೆ ಮೀಸಲಾತಿ ನೀಡಿದೆ ಎಂದು ಕಾಂಗ್ರೆಸ್​ ವಿರುದ್ಧ ರಾಜ್ಯ BJP ಪ್ರಧಾನ ಕಾರ್ಯದರ್ಶಿ N. ರವಿಕುಮಾರ್ ವಾಗ್ದಾಳಿ ನಡೆಸಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು, ನಮ್ಮ ಸಮಾಜದಲ್ಲಿ ಸಾಕಷ್ಟು ಜನ ಶೋಷಿತರಿದ್ದಾರೆ. ಆದರೆ ಈ ಶೋಷಿತ ಸಮುದಾಯಗಳಿಗೆ ಮೀಸಲಾತಿ ಕೊಟ್ಟಿದ್ದು ಮಾತ್ರ ಬಿಜೆಪಿ ಸರ್ಕಾರ.. ಒಳ ಮೀಸಲಾತಿಗಾಗಿ ಸಾಕಷ್ಟು ಹೋರಾಟಗಳು ನಡೆಯುತ್ತಿತ್ತು. ಆದರೆ ಸಾಮಾಜಿಕ ನ್ಯಾಯದ ಅವಶ್ಯಕತೆ ಯಾರಿಗಿತ್ತು ಎಂದು ಕಾಂಗ್ರೆಸ್​​ ವಿರುದ್ಧ ಆಕ್ರೊಶಗೊಂಡ್ರು. ಶೋಷಿತ ಸಮಾಜಕ್ಕೆ ನ್ಯಾಯ ಕೊಡಿಸುವ, ಉದ್ಯೋಗ ನೀಡುವ ಕೆಲಸವನ್ನ ಬಿಜೆಪಿ ಮಾಡುತ್ತಿದೆ. BJP ಸರ್ಕಾರ ರೈತರ ಸರ್ಕಾರ.. ರೈತ ಬಜೆಟ್ ಅನ್ನ ಕೊಟ್ಟ ಮೊದಲ ಸರ್ಕಾರ ಕರ್ನಾಟಕ ಸರ್ಕಾರ ಎಂದು ಹೊಗಳಿದ್ರು.

Share this Story:

Follow Webdunia kannada

ಮುಂದಿನ ಸುದ್ದಿ

ಕಮಲದ ಪರ ಪವನ್ ಕಲ್ಯಾಣ್​ ಪ್ರಚಾರ