Publish Date: Mon, 10 Apr 2023 (15:52 IST)
Updated Date: Mon, 10 Apr 2023 (15:48 IST)
ಬಿಜೆಪಿ ಟಿಕೆಟ್ ಕೈತಪ್ಪುವ ಭೀತಿಯಲ್ಲಿರುವ ಕನಕಗಿರಿ ಶಾಸಕ ಬಸವರಾಜ ದಡೇಸಗೂರ್ ಪಟ್ಟಿ ಬಿಡುಗಡೆ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ. ಕೊಪ್ಪಳದಲ್ಲಿ ಮಾತನಾಡಿದ ಅವರು, ನನಗೆ ಬಿಜೆಪಿ ಬಿ ಫಾರಂ ಸಿಗಲ್ಲ ಎಂಬ ಚರ್ಚೆ ಕ್ಷೇತ್ರದಲ್ಲಿ ನಡೆದಿರೋದು ನಿಜ.. ಆದರೆ, ಅಂತಹ ಯಾವುದೇ ಪ್ರಸ್ತಾಪ ಪಕ್ಷದ ನಾಯಕರ ಮುಂದಿಲ್ಲ, ಬಿಜೆಪಿ ಒಂದು ರಾಷ್ಟ್ರೀಯ ಪಕ್ಷ.. ಸಾಕಷ್ಟು ಸಭೆ, ಚರ್ಚೆ ನಂತರ ಅಭ್ಯರ್ಥಿ ಹೆಸರು ಘೋಷಣೆ ಮಾಡುತ್ತಾರೆ.. ನಿನ್ನೆ ನಡೆದ ಚುನಾವಣೆ ಸಮಿತಿ ಸಭೆಯಲ್ಲಿ ನಮ್ಮ ನಾಯಕರೆಲ್ಲ ಭಾಗವಹಿಸಿದ್ರು.. ಗಂಗಾವತಿಗೆ ಸಿಎಂ ಬಂದಾಗ ದಡೇಸಗೂರ್ ಅವರಿಗೆ ಆಶೀರ್ವಾದ ಮಾಡುವಂತೆ ಹೇಳಿದ್ದಾರೆ.. ಇದು ನಮಗೆ ನೀಡಿದ ಸೂಚನೆ ಅಂತಾ ಕಾರ್ಯಕರ್ತರು ಅರ್ಥೈಸಿಕೊಳ್ಳಬೇಕು.. ಇಂದು ಸಂಜೆ 5 ಗಂಟೆ ಒಳಗೆ ಅಭ್ಯರ್ಥಿಗಳ ಘೋಷಣೆ ಮಾಡಲಿದ್ದಾರೆ. ಮೊದಲ ಪಟ್ಟಿಯಲ್ಲೇ ಕನಕಗಿರಿ ಕ್ಷೇತ್ರದ ಅಭ್ಯರ್ಥಿ ಯಾರು ಅಂತಾ ತಿಳಿಯಲಿದೆ ಎಂದಿದ್ದಾರೆ.