Publish Date: Wed, 14 Nov 2018 (14:13 IST)
Updated Date: Wed, 14 Nov 2018 (14:15 IST)
ಕಾಡು ಕೋಣವೊಂದು ತರಗತಿಯಲ್ಲಿ ಮಕ್ಕಳು ಇದ್ದ ಸಮಯದಲ್ಲಿಯೇ ಶಾಲಾ ಆವರಣಕ್ಕೆ ನುಗ್ಗಿ ಬಂದು ಭಯಭೀತಿ ಮೂಡಿಸಿದ ಘಟನೆ ನಡೆದಿದೆ.
ಶಾಲಾ ಆವರಣಕ್ಕೆ ಕಾಡು ಕೋಣ ನುಗ್ಗಿ ಬಂದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಬಸರೀಕಟ್ಟೆಯಲ್ಲಿ ನಡೆದಿದೆ. ಬಸರೀಕಟ್ಟೆಯ ಸದ್ಗುರು ಪ್ರೌಢ ಶಾಲೆಯ ಆವರಣಕ್ಕೆ ಬಂದ ಕಾಡುಕೋಣ ಆತಂಕ ಸೃಷ್ಟಿಮಾಡಿತು.
ಕಾಡು ಕೋಣ ಕಂಡು ವಿದ್ಯಾರ್ಥಿಗಳು, ಶಿಕ್ಷಕರು ಭಯ ಭೀತಿಗೆ ಒಳಗಾದರು. ಕಳೆದೊಂದು ವರ್ಷದಿಂದ ಆಗಾಗ್ಗೆ ಕಾಣಿಸಿಕೊಳ್ತಿರೋ ಕೋಣದಿಂದಾಗಿ ವಿದ್ಯಾರ್ಥಿಗಳು ಆತಂಕದ ಸ್ಥಿತಿಯಲ್ಲಿ ಕಲಿಕೆ ಮುಂದುವರಿಸುವಂತಾಗಿದೆ.
ಬೃಹದಾಕಾರದ ಕೋಣ ಕಂಡು ಮಕ್ಕಳು ಓಡಿಹೋದ ಘಟನೆ ನಡೆದಿದೆ.