ಪತ್ರಕರ್ತ ಹಾಗೂ ಮಾನವ ಹಕ್ಕುಗಳ ಪರ ಹೋರಾಟಗಾರ ಆಕಾರ್ ಅನಿಲ್ ಪಾಟೀಲ್ ಅಮೆರಿಕಕ್ಕೆ ತೆರಳದಂತೆ ಇಂದು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತಡೆಯಲಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರೋ ಪಾಟೀಲ್, 'ಭಾರತ ತೊರೆಯದಂತೆ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ತಡೆಯಲಾಗಿದೆ.
ನಿರ್ಗಮನ ನಿಯಂತ್ರಣ ಲಿಸ್ಟ್ ನಲ್ಲಿದ್ದೇನೆ. ಯುಎಸ್ ಪ್ರವಾಸಕ್ಕಾಗಿ ನ್ಯಾಯಾಲಯದ ಆದೇಶದ ಮೂಲಕ ಪಾಸ್ ಪೋರ್ಟ್ ಮರಳಿ ಪಡೆದಿದ್ದೇನೆ ಎಂದು ಅವರು ಟ್ವೀಟ್ ಮಾಡಿದ್ದಾರೆ. ಪಾಸ್ ಪೋರ್ಟ್ ಗಾಗಿ ಕೋರ್ಟ್ ಗೆ ಸಲ್ಲಿಸಿದ ಅರ್ಜಿಯ ಪ್ರತಿಯನ್ನು ಆಕಾರ್ ಪಟೇಲ್ ಹಂಚಿಕೊಂಡಿದ್ದು, ಅದನ್ನು ಪ್ರಧಾನ ಮಂತ್ರಿಗಳ ಕಾರ್ಯಾಲಯಕ್ಕೆ ಟ್ಯಾಗ್ ಮಾಡಿದ್ದಾರೆ. ಅಲ್ಲದೆ ಅಮ್ನೆಸ್ಟಿ ಇಂಟರ್ ನ್ಯಾಷನಲ್ ಇಂಡಿಯಾ ವಿರುದ್ಧ ಮೋದಿ ಸರ್ಕಾರ ದಾಖಲಿಸಿರುವ, ಪ್ರಕರಣದಿಂದಾಗಿ ನಾನು ಲುಕ್ ಔಟ್ ಸುತ್ತೋಲೆಯಲ್ಲಿದ್ದೇನೆ, ಎಂದು ಸಿಬಿಐ ಅಧಿಕಾರಿಯೊಬ್ಬರು ಹೇಳಿದ್ದಾರೆ, ಎಂದು ಆಕಾರ್ ಪಟೇಲ್ ಟ್ವೀಟರ್ ನಲ್ಲಿ ಉಲ್ಲೇಖಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಭಾರತೀಯ ಜನತಾ ಪಾರ್ಟಿ ಮತ್ತು ರಾಷ್ಟ್ರೀಯ ಸ್ವಯಂ ಸೇವಕ ಸಂಘ ವಿರುದ್ಧದ ಮೂರು ಟ್ವೀಟ್ ಗಳಿಗಾಗಿ ಐಪಿಸಿಯ ವಿವಿಧ ಸೆಕ್ಷನ್ ಅಡಿಯಲ್ಲಿ 2020ರ ಜೂನ್ 2 ರಂದು ಆಕಾರ್ ಪಟೇಲ್ ವಿರುದ್ಧ ಪ್ರಕರಣ ದಾಖಲಾಗಿತ್ತು.