Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಗೋರಿಪಾಳ್ಯದಲ್ಲಿ ನಡೆದ ಹಿಂದು ಯುವಕ ಚಂದ್ರು ಕೊಲೆ ಪ್ರಕರಣ ಸಂಬಂಧ ಗೃಹ ಸಚಿವ ಆರಗ ಜ್ಞಾನೇಂದ್ರ ನೀಡಿರುವ ಹೇಳಿಕೆಗಳು ಈಗ ಗೊಂದಲಕ್ಕೆ ಕಾರಣವಾಗಿರುವುದು ಮಾತ್ರವಲ್ಲ, ವಿವಾದವನ್ನೂ ಸೃಷ್ಟಿಸಿದೆ.
ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ಚಂದ್ರು ಹತ್ಯೆ ಆಗಿದೆ.ಮಾಹಿತಿ ತೆಗೆದುಕೊಂಡಿದ್ದೇನೆ.ಉರ್ದು ಮಾತಾಡೋಕೆ ಹೇಳಿದ್ದರು.
ಕನ್ನಡ ಬಿಟ್ಟು ಬೇರೆ ಭಾಷೆ ಬರುವುದಿಲ್ಲ ಅನ್ನುವ ಕಾರಣಕ್ಕೆ ಚುಚ್ಚಿ ಚುಚ್ಚಿ ಕೊಲೆ ಮಾಡಿದ್ದಾರೆ. ಆ ಹುಡುಗ ದಲಿತ ಸಮುದಾಯಕ್ಕೆ ಸೇರಿದವನು.ಪ್ರಕರಣ ಸಂಬಂಧ,ಪೊಲೀಸರು ಕೆಲವರನ್ನ ಬಂಧಿಸಿದ್ದಾರೆ ಎಂದು ಹೇಳಿದ್ದರು.
ಆದರೆ ಘಟನೆ ಸಂಬಂಧ ಬೆಂಗಳೂರು ಪೊಲೀಸ್ ಆಯುಕ್ತರು ಬೇರೆಯದೇ ಹೇಳಿಕೆ ನೀಡಿದ್ದರು. ದ್ವಿಚಕ್ರ ವಾಹನ ಅಪಘಾತ ಹಿನ್ನೆಲೆಯಲ್ಲಿ ನಡೆದ ವಿವಾದ ಕೊಲೆಗೆ ಕಾರಣ ಎಂದು ಟ್ವೀಟ್ ಮಾಡಿದ್ದರು. ಈ ಬಗ್ಗೆ ಮಾಜಿ ಸಿಎಂ ಕುಮಾರಸ್ವಾಮಿ ಪ್ರಶ್ನೆ ಮಾಡಿದ್ದರು.