Publish Date: Tue, 15 Dec 2020 (10:36 IST)
Updated Date: Tue, 15 Dec 2020 (10:38 IST)
ಬೆಂಗಳೂರು : ಪರಿಷತ್ ವಿಶೇಷ ಕಲಾಪದ ಹಿನ್ನಲೆಯಲ್ಲಿ ಜೆಡಿಎಸ್ ಸದಸ್ಯರಿಂದ ವಿಪ್ ಜಾರಿ ಮಾಡಲಾಗಿದೆ.
ಕಲಾಪದ ವೇಳೆ ಅವಿಶ್ವಾಸ ನಿರ್ಣಯ ಮಂಡನೆಗೆ ಜೆಡಿಎಸ್ ಬಿಜೆಪಿಗೆ ಬೆಂಬಲ ಸೂಚಿಸಿದೆ. ಪರಿಷತ್ ಸದಸ್ಯ ಬಸವರಾಜ್ ಹೊರಟ್ಟಿ ಬಿಜೆಪಿಗೆ ಬೆಂಬಲ ಘೋಷಿಸಿದ್ದಾರೆ. ಈ ವಿಚಾರದಲ್ಲಿ ನಾವು ಬಿಜೆಪಿ ಪರ ನಿಲ್ಲುತ್ತೇವೆ. ಸಭಾಪತಿ ನಿರ್ಣಯ ಮಂಡನೆ ತಿರಸ್ಕಾರ ಸರಿಯಲ್ಲ ಎಂದು ಅವರು ಹೇಳಿದ್ದಾರೆ.